ಪ್ರತಾಪ್ ಸಿಂಹ ನಿಗೆ ಟಿಕೆಟ್ ಮಿಸ್ !
Mar 17, 2024
1 min read
2
112
ಟಿಕೆಟ್ ಮಿಸ್ ಆಗಲು ಕಾರಣವೇನು! ಕಳೆದ ಚುನಾವಣೆಯಲ್ಲೇ ಅಮಿತ್ ಷಾ ಅವರು ಮೈಸೂರು ರಾಜರನ್ನು ಭೇಟಿ ಮಾಡಿ ಬದಲಾವಣೆ ಮಾಡಲು ಯತ್ನಿಸಿದ್ದರು ಕೊನೆಗಳಿಗೆಯಲ್ಲಿ ಮೈಸೂರು ರಾಜರು ಒಪ್ಪದ ಕಾರಣ ಮತ್ತು ಬೇರೆ ಅಭ್ಯರ್ಥಿ ಹುಡುಕಲು ಸಮಯವಿಲ್ಲದ ಕಾರಣ ಸಿಂಹ ನಿಗೆ ಕೊಟ್ಟರು. ಒಂದು ಹುಡುಗಿಯ ಸೆಕ್ಸ್ ರಿಲೇಟೆಡ್ ಮಾತನಾಡಿದ್ದಾರೆಂಬ ಆಡಿಯೋ ಎಲ್ಲಾಕಡೆ ವೈರಲ್ ಆಗಿತ್ತು. ಈ ಚುನಾವಣೆಯಲ್ಲಿ ಅದೇ ತರಹದ ಹೊಸ ಸುದ್ದಿಯೊಂದು ಹೊರಬರುತ್ತೆಂದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಬಿಜೆಪಿಗೆ ಕೆಟ್ಟ ಹೆಸರು ಬರುವುದರ ಜೊತೆಗೆ ಅಕ್ಕ ಪಕ್ಕದ ಜಿಲ್ಲೆಯ ಮೇಲೆ ಪ್ರಭಾವ ಬೀರಿ ಬಿಜೆಪಿಗೆ ವ್ಯತಿರಿಕ್ತ ಫಲಿತಾಂಶ ಬಂದರು ಬರಬಹುದೆಂಬ ಸುದ್ದಿಇದೆ.
ಇದೆ ಕಾರಣಕ್ಕೆ ಸಂಘದವರು ಸಿಂಹ ನಿಗೆ ಟಿಕೆಟ್ ಕೊಡುವುದು ಬೇಡವೆಂದು ಕಡ್ಡಿಮುರಿದಂತೆ ಹೈ ಕಮಾಂಡ್ ಗೆ ಹೇಳಿದ್ದಾರಂತೆ.
ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ ಸ್ಥಳೀಯ ಬಿಜೆಪಿಯ ಶಾಸಕರು ಮತ್ತು ಮಾಜಿಶಾಸಕರುಗಳು ಸಿಂಹ ನಿಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡುವುದಿಲ್ಲವೆಂಬ ವದಂತಿಯಿದೆ. ಕಾರಣವೆಂದರೆ ಸ್ಥಳೀಯ ಶಾಸಕರು ಕಷ್ಟ ಪಟ್ಟು ಅನುಧಾನ ತಂದು ಕೆಲಸ ಮಾಡಿದರು ಎಲ್ಲ ಉದ್ಘಾಟನೆಗೆ ತಾನೇ ಮುಂದೆ ಹೋಗಿ ತಾನು ಮಾಡಿದ್ದೆಂದು ಕ್ರೆಡಿಟ್ ತೆಗೆದುಕೊಳ್ಳುವ ಹುಚ್ಚುತನ ಸಿಂಹನಿಗೆ ಜಾಸ್ತಿಯಂತೆ, ಒಂದು ಚರಂಡಿ , ಬೀದಿ ದೀಪ ಹಾಕಿಸಿದ್ದು ಮತ್ತು ಬಸ್ ಸ್ಟಾಂಡ್ ಶಾಸಕರ ಅನುಧಾನದಲ್ಲಿ ಕಟ್ಟಿಸಿದ್ದನು ತಾನು ಮಾಡಿಸಿದಂತೆ ಬಿಲ್ಡ್ ಅಪ್ ಕೊಟ್ಟು ಶಾಸಕರಿಗೆ ತಾವು ಮಡಿದ ಕೆಲಸಕ್ಕೆ ಕ್ರೆಡಿಟ್ ಸಿಗದೇ ನಾವು ಸೋತವೆಂದು ಅಲ್ಲಿನ ಮಾಜಿ ಶಾಸಕರುಗಳ ಅಭಿಪ್ರಾಯ. ರಾಮದಾಸ್ ಅವರಿಗೆ ಕೊಟ್ಟ, ಎಲ್ ನಾಗೇಂದ್ರ ಅವರ ಜೊತೆಗಿನ ತಿಕ್ಕಾಟ ಹಾಗು ಕೊಡಗು ಶಾಸಕರುಗಳ ಜೊತೆಗಿನ ಹಗ್ಗ ಜಗ್ಗಾಟವೇ ಪ್ರತಾಪ್ ಅವರಿಗೆ ಮುಳುವಾಗಿದೆಂದರೆ ತಪ್ಪಾಗಲಾರದು.
ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಜೊತೆ ಉತ್ತಮ ಒಡನಾಟ ಮತ್ತು ಸ್ವಪಕ್ಷದವರ ಜೊತೆ ಹಗ್ಗ ಜಗ್ಗಾಟ. ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಮತ್ತು ಸಾ ರಾ ಮಹೇಶ್ ಅವರ ಜೊತೆಗಿದ್ದಂತಹ ಉತ್ತಮ ಸಂಬಂಧವನ್ನು ಬಿಜೆಪಿ ಶಾಸಕರ ಜೊತೆಗಿದ್ದರೆ ಪ್ರತಾಪ್ ಅವರಿಗೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ.