top of page

ಕಾಶಿ ಕಿ ಕಳಾ ಜಾತಿಮಥುರಾ ಮಸ್ಜಿದ್ ಹೋತಿ....ಅಗರ್ ಶಿವಾಜಿ ನ ಹೋತಿ ತೊ ಸುನ್ನತ್ ಹೋತಿ ಸಬ್ಕಿ...

Jun 22, 2024

2 min read

1

30


ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ(!) ಪಡೆಯುತ್ತಿತ್ತು!
ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ(!) ಪಡೆಯುತ್ತಿತ್ತು!

ಭೂಷಣ ಅನ್ನೋ ಕವಿ ಹೇಳುತ್ತಾನೆ,

"ಕಾಶಿಜೀ ಕೀ ಕಳಾ ಜಾತೀ

ಮಥುರಾ ಮಸ್ಜಿದ್ ಹೋತಿ|

ಯದಿ ಶಿವಾಜಿ ನ ಹೋತಾ

ಸುನ್ನತ್ ಹೋತಿ ಸಬ್ ಕೀ||"

ಅಂದರೇನು?

ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ(!) ಪಡೆಯುತ್ತಿತ್ತು!


19 ಫೆಬ್ರವರಿ 1630ರಂದು ಶಿವನೇರಿದುರ್ಗದಲ್ಲಿ ತಂದೆ ಶಹಾಜಿ ಭೋಂಸ್ಲೆ ಹಾಗೂ ತಾಯಿ ಜೀಜಾಬಾಯಿಯ ಮಗನಾಗಿ ಜನನ. ಬಾಲಕನಿರುವಾಗಲೇ ತಾಯಿ ಜೀಜಾಬಾಯಿಯ ಗರಡಿಯಲ್ಲಿ ಪಳಗಿದಾತ. ಸದಾ ಹಿಂದುತ್ವಕ್ಕಾಗಿ ತುಡಿಯುವ ದುಡಿಯುವ ಮನಸ್ಥಿತಿ ಹೊಂದಿದ್ದ. “ಹಿಂದೂ ಧರ್ಮ ಪ್ರತಿಷ್ಟಾಯೆ ಸಿದ್ಧ ಖಡ್ಗ ಸದಾವಯಂ” ಎಂದು ಶಿವಾಜಿ ಬಾಲಕನಾಗಿದ್ದಾಗಲೇ ಹೇಳುತ್ತಿದ್ದನೆಂದು ಕೇಳುವಾಗ ಮೈರೋಮಾಂಚನವಾಗುತ್ತದೆ. 1613-1715ರ ಕಾಲಘಟ್ಟದಲ್ಲಿ ಬದುಕಿದ್ದ ಕಾನ್ಪುರದ ಕವಿ ಭೂಷಣ ತನ್ನ ‘ಶಿವರಾಜ ಭೂಷಣ’ ಗ್ರಂಥದಲ್ಲಿ ಶಿವಾಜಿ ಮಹಾರಾಜರ ಶೌರ್ಯದ ಬಗ್ಗೆ ಹಲವಾರು ಉದಾಹರಣೆಗಳನ್ನು ನೀಡಿದ್ದಾನೆ. ಅವನೇ ಹೇಳುವಂತೆ ಶಿವಾಜಿ ಹುಟ್ಟದೇ ಹೋಗಿದ್ದರೆ, ” ಕಾಶಿ ಕಿ ಕಳಾ ಜಾತಿ, ಮಥುರಾ ಮಸ್ಜಿದ್ ಹೋತಿ, ಅಗರ್ ಶಿವಾಜಿ ನ ಹೋತೆ ತೋ ಸುನ್ನತ್ ಹೋತಿ ಥೀ ಸಬಕಿ..” ಛತ್ರಪತಿ ಶಿವಾಜಿಯ ಮಹತ್ವವೇನೆಂದು ಸಾರಲು ಇದೊಂದು ಪದ್ಯದ ಸಾಲು ಸಾಕು.


“ನಮ್ಮ ರಾಷ್ಟ್ರ, ಧರ್ಮ , ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದಾಗ ಅದರ ಸಂರಕ್ಷಣೆಗಾಗಿ ಎದ್ದು ಬಂದ ಶಿವನ ಅಂಶವೇ ಶಿವಾಜಿ” ಎಂದು ಸ್ವಾಮಿ ವಿವೇಕಾನಂದರು ಉಲ್ಲೇಖಿಸುತ್ತಾರೆ. ಶಿವಾಜಿಯ ತಂದೆ ಶಾಹಜೀ ಬಿಜಾಪುರ ಸುಲ್ತಾನರು ಮೊಘಲರ ಕೈಕೆಳಗೆ ಕೆಲಸ ಮಾಡುತ್ತಿರುವವರು ಎಂಬುದನ್ನು ಸಹಿಸುವುದೇ ಶಿವಾಜಿಗೆ ಕಷ್ಟವಾಗಿದ್ದ ವಿಚಾರವಾಗಿತ್ತು. ತಂದೆಯ ಜೊತೆ ಆಸ್ಥಾನಕ್ಕೆ ಹೋದಾಗಲೂ ಸುಲ್ತಾನನಿಗೆ ನಮಸ್ಕರಿಸದೇ ಬಂದ ಉದಾಹರಣೆ ಇದೆ. ಶ್ರೀ ವಿದ್ಯಾನಂದ ಶೆಣೈಯವರು ತಮ್ಮ ಭಾರತ ದರ್ಶನದಲ್ಲಿ ಶಿವಾಜಿ ಮಹಾರಾಜರ ಸಾಹಸಗಾಥೆಗಳನ್ನು ಹೇಳುವ ಪರಿಯೇ ಕೇಳಲು ಆಹ್ಲಾದಕರವಾಗಿರುತ್ತದೆ.


ಶಿವಾಜಿ ಹುಟ್ಟಿದ್ದು ಈಗಿನ ಮಹಾರಾಷ್ಟ್ರದ ಪ್ರಾಂತ್ಯದಲ್ಲಾದರೂ ಬೆಂಗಳೂರಿನಲ್ಲಿ ತನ್ನ ಬಾಲ್ಯದ ಕೆಲವು ಸಮಯವನ್ನು ಕಳೆದುದಕ್ಕೆ ಉದಾಹರಣೆಯಿದೆ. ಇನ್ನು ವಿದೇಶಿಯರ ಮೇಲೆ ಶಿವಾಜಿ ಮಹಾರಾಜರ ದಂಡಯಾತ್ರೆ ಮೊದಲ್ಗೊಂಡಿದ್ದು ಕರ್ನಾಟಕದಿಂದಲೇ ಅದೂ ಕೂಡಾ ಕರಾವಳಿ ಭಾಗದ ಕುಂದಾಪುರ ಸಮೀಪದ ಬಸ್ರೂರು ವಿನಿಂದ ಎಂಬುದು ನಮಗೆ ಬಹಳ ಹೆಮ್ಮೆಯ ವಿಚಾರ. ಮಂಗಳೂರಿನ ನಂತರ ಕರಾವಳಿಯ ಪ್ರಮುಖ ಬಂದರು ಪ್ರದೇಶ ಬಸ್ರೂರಾಗಿತ್ತು. ಸಹಜವಾಗಿಯೇ ಆಕರ್ಷಿತಗೊಂಡು ಪೋರ್ಚುಗೀಸರು, ಡಚ್ಚರು ಆರಂಭದಲ್ಲಿ ವ್ಯಾಪಾರಕ್ಕೆಂದು ಬಂದು ಬೀಡು ಬಿಟ್ಟವರು ಕ್ರಮೇಣ ಬಸ್ರೂರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲಾರಂಭಿಸಿದ್ದರು. ಆರಂಭದಲ್ಲಿ ಅವರ ಬಗ್ಗೆ ಮೃದು ಧೋರಣೆ ಹೊಂದಿದ್ದ ಜನರು ಯಾವಾಗ ಪೊರ್ಚುಗೀಸರು ಇಲ್ಲಿನ ದೇವಾಲಯಗಳ ಮೇಲೆ ಧಾಳಿ ಆರಂಭಿಸಿದರೋ ಆಗ ತಿರುಗಿ ಬೀಳಲಾರಂಭಿಸಿದರು. ಆದರೆ ಪೋರ್ಚುಗೀಸರನ್ನೋ ಡಚ್ಚರನ್ನೊ ಎದುರಿಸುವಷ್ಟು ಸಾಮರ್ಥ್ಯ ಆಗ ಇರಲಿಲ್ಲ.


ಬಸ್ರೂರು ಕೆಳದಿ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟ ಸಮಯ. ಆಗಿನ್ನೂ ಶಿವಾಜಿ ಮಹಾರಾಜರ ಸಾಮ್ರಾಜ್ಯ ಸ್ಥಾಪನೆ ಆಗಿರುವುದಿಲ್ಲ. 1665ರ ಸಮಯ ಛತ್ರಪತಿ ಶಿವಾಜಿ ಮಹಾರಾಜ್ ಬಸ್ರೂರಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಪರಿಸ್ಥಿತಿಗಳನ್ನು ಮನಗಂಡು ಪೋರ್ಚುಗೀಸರ ವಿರುದ್ಧ ತನ್ನ ನೌಕಾಪಡೆಯನ್ನು ಉಪಯೋಗಿಸಿ ಅವರನ್ನು ಬಸ್ರೂರಿನಿಂದ ಓಡಿಸುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಬಸ್ರೂರನ್ನು ಪೋರ್ಚುಗೀಸರ ಕಪಿಮುಷ್ಟಿಯಿಂದ ಬಿಡಿಸಿದ ಕೀರ್ತಿ ಶಿವಾಜಿ ಮಹಾರಾಜರದ್ದು. ಈ ಯುದ್ಧಕ್ಕೆ ಮೂರು ದೊಡ್ಡ ನೌಕೆಗಳು ಹಾಗೂ 85 ಸಣ್ಣ ನೌಕೆಗಳನ್ನು ಶಿವಾಜಿ ಉಪಯೋಗಿಸಿದ್ದರು ಎನ್ನುವ ಉಲ್ಲೇಖವಿದೆ. ಒಂದರ್ಥದಲ್ಲಿ ಶಿವಾಜಿ ಭಾರತದ ನೌಕಾದಳದ ಪಿತಾಮಹ.


ಶಿವಾಜಿ ಮಹಾರಾಜರು ಜನಿಸಿದ್ದ ಫೆಬ್ರವರಿ 19. ಬಸ್ರೂರಿನಲ್ಲಿ ಮೊದಲ ಬಾರಿ ಜಯಭೇರಿ ಬಾರಿಸಿದ್ದು 1665ರ ಫೆಬ್ರವರಿ 13ರಂದು. ಸುಮಾರು 4ಶತಮಾನದ ನಂತರ ಫೆಬ್ರವರಿ ತಿಂಗಳ ಈ ಸಮಯದಲ್ಲಿ ಶಿವಾಜಿ ಮಹಾರಾಜರ ಸಾಹಸವನ್ನು ಮೆಲುಕು ಹಾಕಿಕೊಳ್ಳುವ ಅಗತ್ಯ ನಮಗಿದೆ. ಹಿಂದವೀ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಶಿವಾಜಿ ಮಹಾರಾಜರ ಧೈರ್ಯ ಸಾಹಸಗಳ ಕಥೆಗಳನ್ನು ನಮ್ಮ ಮುಂದಿನ ಪೀಳಿಗೆಗೂ ತಿಳಿಸಬೇಕಿದೆ. ಒಬ್ಬ ಶಿವಾಜಿ ಹುಟ್ಟಿ 391 ವರ್ಷಗಳ ನಂತರವೂ ನಮಗೆ ಪ್ರೇರಣೆಯಾಗಿ ನಿಲ್ಲಬಲ್ಲನೆಂದರೆ ಜಾತಿ, ಧರ್ಮ, ಭಾಷೆ, ಪ್ರಾಂತ್ಯಗಳಿಗೆ ಮೀಸಲಿರಿಸದೆ ಶಿವಾಜಿ ಮಹಾರಾಜರನ್ನು ಅಖಂಡ ಭಾರತದ ದೊರೆಯಾಗಿ ಕಾಣುವ ವಿಶಾಲದೃಷ್ಟಿಯ ಅಗತ್ಯವಂತೂ ಖಂಡಿತಾ ಇದೆ.


ನಿಜವಾಗಿ ಶಿವಾಜಿ ಮಹಾರಾಜರ ಚರಿತ್ರೆ ನಮ್ಮ ಇತಿಹಾಸದ ಪಠ್ಯಗಳಲ್ಲಿ ಮಹತ್ತರ ಸ್ಥಾನ ಪಡೆಯಬೇಕಾಗಿತ್ತು. ಆದರೆ ಬ್ರಿಟೀಷ್ ಇತಿಹಾಸಕಾರರು ಹಾಕಿಕೊಟ್ಟ ದಾರಿಯಲ್ಲೆ ನಮ್ಮವರೂ ಸಾಗಿದ್ದರಿಂದಲೋ, ಸಾಗುತ್ತಿರುವುದರಿಂದಲೋ ಮಕ್ಕಳಿಗೆ ಶಿವಾಜಿ ಕೇವಲ ಒಂದೇ ಪುಟಕ್ಕೆ ಮೀಸಲು. ಶಿವಾಜಿ ಜನ್ಮತಳೆದ ಸಮಯ ಎಂತಹದ್ದು! ಶಿವಾಜಿ ಇಲ್ಲದೇ ಹೋಗಿದ್ದರೆ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು!? ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಷಾಹಿ, ಆಚೆ ಈಚೆಯಲ್ಲಿ ಇಮಾಮ್ ಶಾಹಿ, ಬರೀದ್ ಷಾಹಿ, ಕುತುಬ್ ಷಾಹಿ, ಅಯೋಧ್ಯೆ ಬಂಗಾಳಗಳಲ್ಲಿ ನವಾಬರು, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಫೋರ್ಚುಗೀಸರು. ಸೂರತ್ ನಲ್ಲಿ ಬ್ರಿಟೀಷರು, ಡಚ್ಚರು. ಎಲ್ಲರೂ ಒಟ್ಟಾಗಿ ತಾಯಿ ಭಾರತಿಯನ್ನು ಸಂಪೂರ್ಣವಾಗಿ ಕಬಳಿಸಲು ಹೊಂಚು ಹಾಕಿ ಕುಳಿತಿದ್ದ ಸಮಯದಲ್ಲಿ ಎದ್ದು ಬಂದವರು ಶಿವಾಜಿ ಮಹಾರಾಜ್.


ಶಿವಾಜಿಯ ಮಹತ್ವ ನಮಗೆ ಅರಿವಾಗೋದು ಯಾವಾಗ?

ಅಕಸ್ಮಾತ್ ಆತ ಹುಟ್ಟದೇ ಇರುತ್ತಿದ್ದರೆ ಏನಾಗುತ್ತಿತ್ತು?

ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು! ಆಧುನಿಕ ಯೂರೋಪ್ನ ತೋಪುಗಳು ತಾಯಿ ಭಾರತಿಯ ಮಾಂಗಲ್ಯವನ್ನು ಭಗ್ನ ಮಾಡಲು ಸಜ್ಜಾಗಿ ನಿಂತಿದ್ದವು! ಧರ್ಮ ಶೃದ್ಧೆ ಮರೆಯಾಗಿದ್ದ, ಕ್ಷಾತ್ರ ತೇಜ ಕಡಿಮೆಯಾಗಿದ್ದ, ಸಂಸ್ಕೃತಿ ನಶಿಸುತ್ತಿದ್ದ ಅಂತಹ ಸಂದರ್ಭದಲ್ಲಿ ಶಿವಾಜಿ ಎದ್ದು ಬಂದ!


" ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್|"




Jun 22, 2024

2 min read

1

30

bottom of page