top of page

WHO IS Lawrence Bishnoi

Oct 14, 2024

3 min read

6

137


ಇತ್ತೀಚಿಗೆ ಸುದ್ದಿಯಲ್ಲಿರುವ ಲಾರೆನ್ಸ್ ಬಿಷ್ನೋಯಿ ವರ್ಕ್ ಫ್ರಮ್ ಜೈಲ್ ಪರಿಕಲ್ಪನೆಯ ಹರಿಕಾರ. ಯಾರು ಈ ಬಿಶ್ನೋಯ್?
ಇತ್ತೀಚಿಗೆ ಸುದ್ದಿಯಲ್ಲಿರುವ ಲಾರೆನ್ಸ್ ಬಿಷ್ನೋಯಿ ವರ್ಕ್ ಫ್ರಮ್ ಜೈಲ್ ಪರಿಕಲ್ಪನೆಯ ಹರಿಕಾರ. ಯಾರು ಈ ಬಿಶ್ನೋಯ್?

ಬಿಷ್ನೋಯ್ ಎಂಬುದು ಹದಿನೈದನೇ ಶತಮಾನದಲ್ಲಿ ಗುರು ಜಮ್ಭೇಶ್ವರರು ಸ್ಥಾಪಿಸಿದ ಒಂದು ವೈಷ್ಣವ ಪಂಥ. ರಾಜಸ್ತಾನ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಭಾಗದಲ್ಲಿ ಸುಮಾರು ಹದಿನೈದು ಲಕ್ಷ ಜನಸಂಖ್ಯೆ ಇರುವ ಸಾಂಪ್ರದಾಯಿಕ ಪಂಥ, ತಮ್ಮ ಗುರುಗಳು ಸ್ಥಾಪಿಸಿದ 29 ಧಾರ್ಮಿಕ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಧಾರ್ಮಿಕರು. ಈ ತತ್ವಗಳಲ್ಲಿ ಪ್ರಕೃತಿ ಮತ್ತು ಪ್ರಾಣಿಗಳ ಪಾಲನೆ ಪೋಷಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಪರಿಸರ ಸಂರಕ್ಷಣೆ ಇವರಿಗೆ ರಕ್ತಗತವಾಗಿ ಬೆಳೆದು ಬಂದ ಸಂಸ್ಕಾರ.


ಇಂಥಹ ಒಂದು ಪಂಗಡದ ದಂಪತಿಗಳಿಗೆ ಪಂಜಾಬಿನ ಫಿರೋಜ್ ಪುರ ಜಿಲ್ಲೆಯ ಒಂದು ಹಳ್ಳಿಯಲ್ಲಿ 12 ಫೆಬ್ರವರಿ 1993 ರಂದು ಒಂದು ಮಗು ಹುಟ್ಟುತ್ತದೆ. ಹಾಲುಗಲ್ಲದ, ಹೊಳೆಯುವ ಕಣ್ಣುಗಳ ಈ ಮುದ್ದಾದ ಮಗುವಿಗೆ ' ಮಿಲ್ಕಿ '

ಎನ್ನುವ ಮನೆ ಹೆಸರು ಮತ್ತು ಲಾರೆನ್ಸ್ ...ಅಂದರೆ ಆಂಗ್ಲ ಭಾಷೆಯಲ್ಲಿ ಮುದ್ದಾದ ಮಗು ಅಂತೆ..ತಾಯಿ ಸುನೀತಾ ಬಿಶ್ನೋಯ್ ಇಟ್ಟ ಹೆಸರದು. ಅಂದ ಹಾಗೆ ಕ್ರಿಶ್ಚಿಯಾನಿಟಿಗೂ ಇವರ ಹೆಸರಿಗೂ ಯಾವ ಸಂಬಂಧವೂ ಇಲ್ಲ. ಇಂಥಹ ಸಾತ್ವಿಕ ಪಂಥದಲ್ಲಿ ಹುಟ್ಟಿದ ಹುಡುಗ ಮುಂದೇನಾಗುತ್ತಾನೆ ನೋಡಿ.


30 ವರ್ಷದ ಲಾರೆನ್ಸ್ ಬಿಶ್ನೋಯ್ ಈಗ ಉತ್ತರ ಭಾರತದಲ್ಲಿ, ವಿಶೇಷವಾಗಿ ಪಂಜಾಬಿನಲ್ಲಿ ಹಾಗೇ ಕೆನಡಾ ಮತ್ತು ಥೈಲ್ಯಾಂಡ್ ಸೇರಿದಂತೆ ಹಲವಾರು ವಿದೇಶಗಳಲ್ಲಿ ಖಾಲಿಸ್ತಾನಿ ಭಯೋತ್ಪಾದಕರಿಗೆ ಕಂಪನ ಮೂಡಿಸುತ್ತಿರುವ ಸುಮಾರು 700 ಜನರ ಶಾರ್ಪ್ ಶೂಟರುಗಳ ತಂಡದ ನಾಯಕ ! ಬಿಷ್ನೋಯ್ ಪಂಥದವರಿಗೆ ಕೃಷ್ಣಮೃಗ ಒಂದು ಪವಿತ್ರವಾದ ಪ್ರಾಣಿ, ಹಾಗಾಗಿ ಕೃಷ್ಣಮೃಗವನ್ನು ಬೇಟೆಯಾಡಿದ ಸಲ್ಮಾನ್ ಖಾನನ್ನು ಕೊಲ್ಲುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟವನು ಇವನು.


2022 ಮೇ 29 ರಂದು ತನ್ನ ಗೆಳೆಯನ ಸಾವಿಗೆ ಕಾರಣನಾದ ಪ್ರಸಿದ್ಧ ಪಂಜಾಬಿ ಹಾಡುಗಾರ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದು ಮೂಸೇವಾಲನನ್ನು ಹಾಡುಹಗಲಿನಲ್ಲಿ ಕೊಂದಿದ್ದು ಇವನ ತಂಡದವರೇ. 21 ಸೆಪ್ಟೆಂಬರ್ 2023 ರಂದು ಕೆನಡಾದ ವಿನ್ನಿಪಿಗ್ ಪ್ರಾಂತ್ಯದಲ್ಲಿ ಸುಖದೂಲ್ ಸಿಂಗ್ ಎನ್ನುವ ಖಾಲಿಸ್ತಾನಿ ಭಯೋತ್ಪಾದಕ ಮತ್ತು ಹಲವಾರು ಕೊಲೆಗಳ ಆಪಾದಿತನನ್ನು ಮಟಾಷ್ ಮಾಡಿದ್ದೇ ಇವನ ತಂಡದವರು. ಸುಮಾರು ಇಪ್ಪತ್ತಕ್ಕೂ ಹೆಚ್ಚು FIR ಗಳನ್ನು ಹೊತ್ತುಕೊಂಡು ಈಗ ಸದ್ಯಕ್ಕೆ ತಿಹಾರ್ ಜೈಲಿನ ಅತಿ ಹೆಚ್ಚು ಭದ್ರತೆಯ ವ್ಯವಸ್ಥೆ ಇರುವ ಜೈಲಿನ ಎಂಟನೇ ನಂಬರಿನ ವಾರ್ಡಿನಲ್ಲಿರುವ ಲಾರೆನ್ಸ್ ಬಿಶ್ನೋಯಿನ ರೋಚಕ ಜೀವನಗಾಥೆ ಸಿನಿಮಾ ಮತ್ತು ಕಾದಂಬರಿಯ ಸರಕು.


ಪಂಜಾಬಿನ ಫಿರೋಜ್ ಪುರ ಜಿಲ್ಲೆಯ ಅಬೋಹರ್ ಎನ್ನುವ ಹಳ್ಳಿಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ, 2010 ರಲ್ಲಿ ಪದವಿ ಶಿಕ್ಷಣಕ್ಕೆ ಚಂಡೀಘಡಕ್ಕೆ ಬಂದು ಸೇರಿಕೊಳ್ಳುತ್ತಾರೆ. ಚಂಡೀಘಡದ DAV ಕಾಲೇಜಿನ ರಾಜಕೀಯ ವಾತಾವರಣ ಅವನನ್ನು ಆಕರ್ಷಿಸುತ್ತದೆ ಮುಂದೆ ಪಂಜಾಬ್ ಯೂನಿವರ್ಸಿಟಿ ಕ್ಯಾಂಪಸ್ ಕೌನ್ಸಿಲ್ಲಿನ ಸಕ್ರಿಯ ಸದಸ್ಯನಾಗುತ್ತಾನೆ. ಆದೇ ಸಮಯಕ್ಕೆ ಕೌನ್ಸಿಲ್ಲಿನ ಪ್ರೆಸಿಡೆಂಟ್, ಸತಿಂದರ್ ಸಿಂಗ್, ಆಲಿಯಾಸ್ ಗೋಲ್ಡಿ ಬ್ರಾರ್ ಎನ್ನುವ ಫೈರ್ ಬ್ರಾಂಡ್ ಯುವನಾಯಕನ ಪರಿಚಯವಾಗುತ್ತದೆ ಮತ್ತು ಅವನ ಉದ್ರೇಕಕಾರಿ ಭಾಷಣಗಳಿಂದ ಪ್ರಭಾವಿತನಾಗುತ್ತಾನೆ. ವಿದ್ಯಾರ್ಥಿಗಳ ಗುಂಪುಗಳ ನಡುವಿನ ಘರ್ಷಣೆಗಳು ಆಗಾಗ ಹಿಂಸಾತ್ಮಕ ಸ್ವರೂಪ ಪಡೆಯುವುದು DAV ಕಾಲೇಜಿನಲ್ಲಿ ಸರ್ವೇಸಾಮಾನ್ಯದ ವಿಷಯ. ಮುಂದೆ ಲಾರೆನ್ಸ್ ಬಿಷ್ನೋಯ್ ಕೌನ್ಸಿಲ್ಲಿನ ಚುನಾವಣೆಗೂ ನಿಂತು ಸೋಲನ್ನು ಅನುಭವಿಸುತ್ತಾನೆ. ಇದರ ನಡುವೆಯೇ ಪದವಿಯನ್ನು ಗಳಿಸಿ ಮುಂದೆ ಮುಕ್ತಸರ್ ಪಟ್ಟಣದಲ್ಲಿ LLB ಕೋರ್ಸಿಗೆ ಪ್ರವೇಶ ಪಡೆಯುತ್ತಾನೆ. ಅಲ್ಲಿಯೂ ರಾಜಕೀಯ ವಾತಾವರಣ ಬಿಸಿಯಾಗಿಯೇ ಇರುತ್ತದೆ, ವಿದ್ಯಾರ್ಥಿಗಳ ಗುಂಪಿನ ನಡುವೆ ಕೆಲವು ಸಣ್ಣಪುಟ್ಟ ಕಲಹಗಳು ಹಿಂಸೆಯ ರೂಪ ಪಡೆದುಕೊಂಡು ಲಾರೆನ್ಸ್ ಬಿಷ್ನೋಯಿಗೆ ಲಾಕಪ್ಪಿನ ಅನುಭವವೂ ಆಗುತ್ತದೆ. ಅಲ್ಲಿ ಕೆಲವು ಕ್ರಿಮಿನಲ್ಲುಗಳ ಪರಿಚಯವಾಗಿ, ಕೈಗೆ ಪಿಸ್ತೋಲ್ ಸಹಾ ಸಿಕ್ಕಿಬಿಡುತ್ತದೆ, ಅಲ್ಲಿಂದ ಪ್ರಾರಂಭವಾಗುತ್ತದೆ ಲಾರೆನ್ಸ್ ಬಿಷ್ನೋಯಿಯ ಜೀವನದ ಪಾತಕಿಗಳ ನಡುವಿನ ಹೊಸ ಅಧ್ಯಾಯ, ಗ್ಯಾಂಗ್ ವಾರ್ ಗಳ ವೃತ್ತಾಂತ. ಪಂಜಾಬಿನಲ್ಲಿ ಡ್ರಗ್ಸ್ ಮತ್ತು ಶರಾಬಿನ ವಹಿವಾಟಿನ ದೊಡ್ಡದೊಂದು ಗುಂಪೇ ಇದೆ. ಲಾರೆನ್ಸ್ ಬಿಷ್ನೋಯ್ ಕಟ್ಟಿಕೊಂಡ ಚಿಕ್ಕದಾದ ಗ್ಯಾಂಗ್ ಈ ಲಿಕ್ಕರ್ ಲಾಬಿಯಿಂದ ಹಣ ಪೀಕಲು ಶುರು ಹಚ್ಚಿಕೊಳ್ಳುತ್ತದೆ. ಆ ಹಣದಿಂದ ಶಸ್ತ್ರಾಸ್ತ್ರ ಗಳನ್ನು ಖರೀದಿಸಿ ತಮ್ಮ ಗುಂಪನ್ನು ಬಲಪಡಿಸಲಾರಂಭಿಸುತ್ತಾರೆ. ಜೊತೆಗೆ ಪಂಜಾಬ್ ಮತ್ತು ಹರಿಯಾಣದ ಪೋಲಿಸ್ ಠಾಣೆಗಳಲ್ಲಿ ಲಾರೆನ್ಸ್ ಬಿಷ್ನೋಯ್ ವಿರುದ್ಧದ FIR ಗಳ ಕಡತ ಏರುತ್ತಾ ಹೋಗುತ್ತದೆ. 2018 ರಲ್ಲಿ ಜೋಧಪುರದ ಕೋರ್ಟ್ ಆವರಣದಲ್ಲಿಯೇ ಬಿಷ್ನೋಯ್ ಪಂಥದವರಿಗೆ ಪವಿತ್ರವಾದ ಕೃಷ್ಣಮೃಗವನ್ನು ಬೇಟೆಯಾಡಿ ಕೊಂದಿದ್ದಕ್ಕೆ ನಾವು ಅವನನ್ನು ಕೊಂದೇ ಕೊಲ್ಲುತ್ತೇವೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ ಮೇಲಂತೂ ಮಹಾರಾಷ್ಟ್ರ ಪೊಲೀಸರು ಸೇರಿದಂತೆ ಹಲವಾರು ರಾಜ್ಯಗಳ ಪೋಲೀಸರು ಚೌಕನ್ನರಾಗಿ ಈ ಗ್ಯಾಂಗಿನ ಚಟುವಟಿಕೆಗಳ ಮೇಲೆ ಕಣ್ಣಿಟ್ಟುರುತ್ತಾರೆ. ಯಾವುದೋ ಒಂದು ಕೇಸಿನಲ್ಲಿ ಉತ್ತರಾಖಂಡದಲ್ಲಿ ಅರೆಸ್ಟ್ ಆದ, ಈ ಗ್ಯಾಂಗಿನ ಶಾರ್ಪ್ ಶೂಟರ್ ರಾಹುಲ್ ವಿಚಾರಣೆ ನಡೆಸಿದ ವೇಳೆ ಪೋಲೀಸರಿಗೆ ಶಾಕ್ ಆಗುವಂತ ವಿಷಯ ಹೊರಬಿತ್ತು, ಅದೇನೆಂದರೆ 2020 ರ ಜನವರಿಯಲ್ಲಿ ಇದೇ ರಾಹುಲ್ ಸಲ್ಮಾನ್ ಖಾನನ ಬಾಂದ್ರಾ ಬಂಗಲೆಯ ಆಸುಪಾಸಿನಲ್ಲಿ ಎರಡು ದಿನಗಳವರೆಗೆ ಸುತ್ತಾಡಿ ಸಲ್ಮಾನ್ ಖಾನನ ಚಲನವಲನವನ್ನು ಗಮನಿಸಿಕೊಂಡು ಬಂದಿದ್ದನಂತೆ.


LLB ಮಾಡಿಕೊಂಡಿರುವ ಲಾರೆನ್ಸ್ ಬಿಷ್ನೋಯಿಗೆ ಕಾನೂನಿನ ಎಲ್ಲಾ ಪ್ರಾಕಾರಗಳ ಅರಿವಿದ್ದಂತೆ ಕಾಣುತ್ತದೆ. ಪೋಲೀಸರು ಯಾವಾಗ ಬೇಕಾದರೂ ಎನ್ಕೌಂಟರ್ ಮಾಡಬಹುದು ಎಂಬುದನ್ನು ತಿಳಿದಿದ್ದ ಲಾರೆನ್ಸ್ 2015 ರಲ್ಲಿ ಚಂಡೀಘಡದ ಜಿಲ್ಲಾ ಕೋರ್ಟಿನಲ್ಲಿ ಒಂದು ಪೆಟಿಷನ್ ಹಾಕುತ್ತಾನೆ, ಅದೇನೆಂದರೆ ಪೋಲೀಸರು ಜೈಲಿನಿಂದ ಜೈಲಿಗೆ ವರ್ಗಾವಣೆ ಮಾಡುವಾಗ, ಕೋರ್ಟಿಗೆ ಕರೆದುಕೊಂಡು ಬರುವಾಗ ಯಾವಾಗಲೂ ತನಗೆ ಕೈಕೋಳ ತೊಡಿಸಿಯೇ ಇರಬೇಕು ಎಂದು. ಕೋರ್ಟ್ ಇದಕ್ಕೆ ಅನುಮತಿ ನೀಡಿದೆ, ಹಾಗಾಗಿ ಇವನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ, ಅಥವಾ ಪೋಲೀಸರ ಮೇಲೆ ದಾಳಿ ನಡೆಸಿದ ಅದಕ್ಕೆ ಎನ್ಕೌಂಟರ್ ಮಾಡಿದೆವು ಎನ್ನುವುದಕ್ಕೆ ಈಗ ಅವಕಾಶವಿರುವುದಿಲ್ಲ.

ಲಾರೆನ್ಸ್ ಬಿಷ್ನೋಯ್ ಗ್ಯಾಂಗಿಗೂ ಖಾಲಿಸ್ತಾನಿಗಳ ಭಯೋತ್ಪಾದಕರಿಗೂ, ಪ್ರತಿಪಾದಕರಿಗೂ ಹಾವು ಮುಂಗಸಿಯ ಸಂಬಂಧ.


ಲಾರೆನ್ಸ್ ಬಿಷ್ನೋಯಿಯ ಇನ್ನೊಂದು ಮುಖ ಅಚ್ಚರಿ ಮೂಡಿಸುವಂತಹದ್ದು. ಜೈಲಿನ ಸಿಬ್ಬಂದಿಯೇ ಹೇಳುವಂತೆ, ಲಾರೆನ್ಸ್ ಪ್ರತಿದಿನ ಬೆಳಿಗ್ಗೆ 'ಸುಖ್ ಮಣಿ ಸಾಹೇಬ್ ನಿತ್ ನೇಮ್ ' ಪಠಣ ಮಾಡುತ್ತಾನಂತೆ. ಇದು ಸಿಖ್ಖರ ಪವಿತ್ರ ಗ್ರಂಥದ ಒಂದು ಭಾಗ. ಸಾಮಾಜಿಕ ಜಾಲತಾಣಗಳಲ್ಲಿ ಲಾರೆನ್ಸ್ ಬಿಷ್ನೋಯ್ ಕ್ರಾಂತಿಕಾರಿ ಭಗತ್ ಸಿಂಗ್ ಚಿತ್ರವಿರುವ ಟೀ ಶರ್ಟಿನ ಫೋಟೋಗಳು ಹರಿದಾಡುತ್ತಿವೆ.

ಅವನೇ ಹೇಳಿಕೊಳ್ಳುವ ಹಾಗೆ.. ನಾವು ಮಾಡುತ್ತಿರುವುದೂ, ಸಮಾಜ ಸೇವೆ ಮತ್ತು ದೇಶ ಸೇವೆಯೇ, ಆದರೆ ನಮ್ಮ ಮಾರ್ಗ ವಿಭಿನ್ನವಾಗಿದೆ...ಅಷ್ಟೇ.

ಖಾಲಿಸ್ತಾನಿಯರಂತಹ ವಿದ್ರೋಹಿಗಳನ್ನು ನಿರ್ನಾಮ ಗೊಳಿಸಲು ಲಾರೆನ್ಸ್ ಬಿಷ್ನೋಯ್ ಗ್ಯಾಂಗಿನ ಪರೋಕ್ಷ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಕೆಲವೊಮ್ಮೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಾದ ಅನಿವಾರ್ಯತೆ ಇರುತ್ತದೆ.


ಶತ್ರುವಿನ ಶತ್ರು ನಮ್ಮ ಮಿತ್ರ ಎಂದುಕೊಳ್ಳಬೇಕೇ ?


Via- CREDIT Wing Cdr Sudarshan ಸರ್


Oct 14, 2024

3 min read

6

137

bottom of page