ಸ್ವಂತ ಮಗಳಂತೆ ಸಾಕುತ್ತಿರುವ ಸೋನು ಗೌಡ
Mar 20, 2024
1 min read
3
34
ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಮತ್ತು ಸೇವಂತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ
ಜನ ಕೆಟ್ಟ ಕೆಲಸ ಮಾಡಿದ್ರು ಟ್ರೊಲ್ ಮಾಡ್ತಾರೆ ಒಳ್ಳೆಯ ಕೆಲಸ ಮಾಡುವ ಮನಸ್ಸು ಮಾಡಿದ್ರು ಟ್ರೊಲ್ ಮಾಡ್ತಾರೆ. ಹೌದು
ಬಡ ಕುಟುಂಬದ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ಸೋನು ಪ್ರತಿ ದಿನವೂ ವಿಭಿನ್ನ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ.
ಸೇವಂತಿಯನ್ನು ದತ್ತು ತೆಗೆದುಕೊಳ್ಳಬೇಕು ಅನ್ನೋ ಯೋಚನೆ ಬರುವ ಮುನ್ನವೇ ನಾನು ಆಕೆಯನ್ನು ಚೆನ್ನಾಗಿ ನೋಡಿಕೊಂಡೆ. ಚಿನ್ನದ ಚೈನ್, ಚಿನ್ನದ ಓಲೆ, ಬೆಳ್ಳಿ ಕಾಲುಗೆಜ್ಜೆ ಮತ್ತು ಬಟ್ಟೆ ಬರಿ ಅಂತ ಕೊಡಿಸಿರುವೆ. ಸೇವಂತಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ಮಾಡಿರುವೆ. ದತ್ತು ತೆಗೆದುಕೊಳ್ಳುವುದು ಒಂದು ಪ್ರೊಸೀಜರ್ ಇದೆ ಹೀಗಾಗಿ ಅದ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಸಂಪೂರ್ಣವಾಗಿ ತಿಳಿಸುತ್ತಿಲ್ಲ. ರಾಯಚೂರಿನಲ್ಲಿ ನನ್ನ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿ ಆಕೆಯನ್ನು ನನ್ನೊಟ್ಟಿಗೆ ಕಳುಹಿಸಿರುವುದು.
ನಮ್ಮ ಮನೆಗೆ ಕರೆದುಕೊಂಡು ಬಂದು 15 ದಿನ ಆಗಿಲ್ಲ ಆಗಲೇ ನೆಗೆಟಿವ್ ಆಗಿ ಮಾತನಾಡಬಾಡಿ.ಎಂದು ಸೋನು ಗೌಡ ಕಿಡಿ ಕಾರಿದ್ದಾರೆ
ಕೆಲವು ದಿನಗಳ ಹಿಂದೆ ಒಂದು ಟ್ರೋಲ್ ಪೇಜ್ ಹಾಕಿರುವ ಪೋಸ್ಟ್ ನೋಡಿದೆ. ಹಣ ಮಾಡಲು ವ್ಯೂಸ್ ಪಡೆಯಲು ಒಂದು ಬಡ ಕುಟುಂಬದ ಹುಡುಗಿಯನ್ನು ಬಳಸಿಕೊಳ್ಳುತ್ತಿರುವೆ ದತ್ತು ಅಂತ ಪದ ಬಳಸಿ ಮೋಸ ಮಾಡುತ್ತಿರುವೆ ಎಂದು ಆದರೆ ಗುರು ನಾನು ಕೆಟ್ಟ ಪದ ಬಳಸಬಾರದು ಅಂತ ಅಂದುಕೊಂಡಿದ್ದೀನಿ ಆದರೆ.ನಿನ್ನಂಥ ಚಪ್ಪರ್ ನನ್ನ ಮಗ ನನ್ನಿಂದ ವ್ಯೂಸ್ ತೆಗೆದುಕೊಳ್ಳುತ್ತಿರುವೆ ಎಂದು ಸೋನು ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.