ಹಣೆ ಬರಹವನ್ನು ಪರಶಿವನೂ ಬದಲಿಸಲು ಸಾಧ್ಯವಿಲ್ಲ
Apr 28, 2024
2 min read
2
59
ಲಲಾಟ ಲಿಖಿತಾ ರೇಖಾ ಪರಮೇಷ್ಟೀ ನಶಿಷ್ಟತೆ ಕರ್ಮಣ್ಯೇ ವಾಧಿಕಾರಸ್ತೆ ಮಾಪಲೇಶು ಕದಾಚಲೇ
ಹಣೆ ಬರಹವನ್ನು ಪರಶಿವನೂ ಬದಲಿಸಲು ಸಾಧ್ಯವಿಲ್ಲ ಕರ್ಮಕ್ಕೆ ಅನುಗುಣವಾಗಿ ಫಲ ದೊರೆಯುತ್ತದೆ ಒಳಿತು ಮಾಡು ಮನುಜಾ ನೀನು ಇರೋದು ಮೂರೆ ದಿವಸಾ
ಕಷ್ಟ ಬಂದಾಗ ಓ ದೇವರೇ ನನಗೇಕೆ ಇಷ್ಟು ಕಷ್ಟ ಎಂದು ಹೇಳುತ್ತೇವೆ .
ಅಯ್ಯಾ ನೀ ಮಾಡಿದಾ ಕರ್ಮ ಬಲವಂತ ವಾದೊಡೆ ನಾ ಏನ ಮಾಡಲಿ ಎಂದು ಭಗವಂತ ಹೇಳುತ್ತಾನೆ .
ಕಾರಣ ಇಲ್ಲದೆ ಯಾವ ಕಷ್ಟಗಳೂ ಮನುಷ್ಯನಿಗೆ ಆಗಲಿ ಜೀವಿಗಳಿಗೆ ಆಗಲಿ ಬರುವುದಿಲ್ಲ .
ಜನ್ಮ ಜನ್ಮಾಂತರಗಳಲ್ಲಿ ಹಲವಾರು ಪಾಪಗಳನ್ನು ಮಾಡಿ ಈ ಜನ್ಮದಲ್ಲಿ ಹುಟ್ಡಿದಾಕ್ಷಣ ಹೊಸ ಹುಟ್ಟು ಬಂದಾಕ್ಷಣ ಎಲ್ಲಾ ಪಾಪ ಕರ್ಮಗಳೂ ಹೋಗಿ ಬಿಡುತ್ತದೆಯಾ .
ಅಯ್ಯಾ ನೀ ಇಂದು ಈ ಜನ್ಮದಲ್ಲಿ ಬಹು ವಿಧದ ಕಷ್ಟ ಅನುಭವಿಸುತ್ತಿದ್ದೀಯ ಎಂದರೆ ಅದು ಪೂರ್ವ ಜನ್ಮದ ಪಾಪದ ಕರ್ಮ ಫಲವಷ್ಟೇ ಅದಕ್ಕೆ ದೇವರನ್ನು ದೂರುವುದು ಎಷ್ಟು ಸರಿ .
ಮಾಡಬಾರದ ಪಾಪ ಕೃತ್ಯಗಳನ್ನು ಮಾಡಿ ಸತ್ತು ಹೊಸ ಜನ್ಮ ಎತ್ತಿದೊಡೆ ಕರ್ಮ ಬೆನ್ನತ್ತಿ ಬರದೆ ಇರುತ್ತದೆಯಾ .
ದಾರಿಯಲಿ ಭಿಕ್ಷುಕ ಹೆಳವ ಅನಾಥ ಅಂಗವಿಕಲರ ಕಂಡಾಗ ಕರುಳು ಚುರ್ರ್ ಎಂದು ಅಯ್ಯೋ ನಿಷ್ಕರುಣಿ ದೇವರೇ ನಿನಗೇ ದಯೆ ಎಂಬುದೇ ಇಲ್ಲವೇ ಇವರೆಲ್ಲಾ ಏನು ಮಾಡಿದ್ದರು ಇವರಿಗೆ ಇಷ್ಟು ಕಷ್ಟ ಯಾಕೆ ಎಂದು ದೇವರನ್ನು ದೂರುವವರೇ ಬಹಳ .
ಆದರೆ ಎಂದಾದರೂ ಒಮ್ಮೆ ಯೋಚಿಸಿದ್ದೀರಾ ಯಾಕೆ ಇವರಿವೆಲ್ಲಾ ಇಂತಹ ಜೀವನ ಎಂದು .
ಕರ್ಮ ಫಲ ವಯ್ಯಾ ಕರ್ಮಫಲ ಅವರ ಹಿಂದಿನ ಜನ್ಮದಲ್ಲಿ ನಾನಾ ಪಾಪ ಕೃತ್ಯಗಳನ್ನು ಮಾಡಿರುತ್ತಾರೆ ಕೊಲೆ ದರೋಡೆ ಅತ್ಯಾಚಾರ ಅನಾಚಾರ ಮಾಡಿ ಈಗ ಈ ಜನ್ಮದಲ್ಲಿ ಇಂತಹ ರೂಪದಲ್ಲಿ ಜನಿಸಿ ತಮ್ಮ ಜನ್ಮಾಂತರಗಳ ಪಾಪಗಳನ್ನು ಕಳೆದು ಕೊಳ್ಳುತ್ತಾರೆ .
ಅಯ್ಯಾ ದೇವರು ಸುಮ್ಮನೆ ಯಾರಿಗೂ ಕಷ್ಟ ಕೊಡುವುದಿಲ್ಲ ಅಯ್ಯಾ ಅವರು ಮಾಡಿದ ಕರ್ಮಗಳ ಅನುಸಾರ ಅವರು ನಾನಾ ಕಷ್ಟಗಳನ್ನು ಅನುಭವಿಸುತ್ತಾರೆ . ಇದರಲ್ಲಿ ದೇವರು ನಿಷ್ಕರುಣಿ ಎಂದರೆ ಹೇಗೆ ...?
ವೀರಪ್ಪನ್ ಲಾಡೆನ್ ನಂತಹ ದುರುಳರು ಮಹಾ ಪಾಪ ಕಾರ್ಯ ಮಾಡಿ ಈಗ ಅಂಗವಿಕಲರಾಗಿ ಕುಂಟರಾಗಿ ಅನಾಥರಾಗಿ ಹುಟ್ಟಿ ಅನ್ನ ನೀರಿಗಾಗಿ ಅಲೆದಾಡಿದರೆ ಪಾಪ ಅನ್ನುವಿರಾ ಇನ್ನೂ ಸಾಯಲಿ ಎಂದು ಹನಿ ನೀರನ್ನೂ ಕೊಡುವುದಿಲ್ಲ .
ಹಾಗೇಯೇ ಈ ಜನ್ಮದಲ್ಲಿ ಬಿಕಾರಿಗಳಾಗಿ ಜನಿಸಿ ಅವರ ಪಾಪ ವಿಮೋಚನೆ ಮಾಡಲು ಅಷ್ಟು ಕಷ್ಟ ಪಟ್ಟರೆ ಪಡಲಿ .
ಅವರವರ ಕರ್ಮ ಅವರ ಬೆನ್ನ ಹಿಂದೆ .
ಇದರಲ್ಲಿ ದೇವರ ತಪ್ಪು ಏನಿದೆ ನಿನ್ನ ಪಾಪ ಪುಣ್ಯಕ್ಕೆ ಅನುಸಾರವಾಗಿ ನೀನು ಕಷ್ಟ ಪಡಬೇಕು .
ವಿಧಿ ಬರಹದ ಮುಂದೆ ಹರಿ ಹರ ಭ್ರಹ್ಮರೂ ಏನೂ ಮಾಡಲಾರರು .
ದೇವರುಗಳು ಸಹ ಭೂಲೋಕದಲ್ಲಿ ಜನ್ಮ ವೆತ್ತಿ ಕರ್ಮ ಕಳೆದು ಕೊಂಡವರೇ .
ರಾಮ ಸೀತೆ ಜನ್ಮ ತಾಳಿ ಅವರೇ ದೇವರಾಗಿದ್ದರೂ ಇಲ್ಲಿ ಬಂದು ನಾನಾ ನೋವು ಕಷ್ಟ ಎದುರಿಸಲಿಲ್ಲವೇ .
ಯಾರಿಗಿಲ್ಲ ಕಷ್ಟ ಹೇಳಿ . ಪುಣ್ಯ ಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ . ಒಬ್ಬರಿಗೆ ಸಹಾಯ ಏನೂ ಮಾಡದೆ ಸ್ವಾರ್ಥಿಯಾಗಿ ಬದುಕಿ ಈಗ ಸುಖ ಬೇಕು ಎಂದರೆ ಸಿಗುವುದಾ .
ಮಾನವ ಬುದ್ದಿ ಜೀವಿ ಮಾತು ಬರುವ ಏಕೈಕ ಜೀವಿ ಈ ಭೂಮಿ ಮೇಲೆ . ಭಾವನೆಗಳನ್ನು ಮಾತಿನಲ್ಲಿ ವ್ಯಕ್ತ ಪಡಿಸುವ ಜೀವಿ ಮಾನವ ಆಗಿದ್ದಾಗ ಒಬ್ಬರ ಕಷ್ಟ ಸುಖಗಳಲ್ಲಿ ಬೆರೆತು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಪುಣ್ಯ ತಾನಾಗಿಯೇ ಲಭಿಸಿ ಜನ್ಮ ಜನ್ಮಗಳಲ್ಲಿ ಸುಖ ಸಂತೋಷ ನೆಮ್ಮದಿಯಿಂದ ಇರುತ್ತಾರೆ .
ನಮ್ಮ ಒಳ್ಳೆಯದು ಕೆಟ್ಟದ್ದು ನಮ್ಮಲ್ಲಿಯೇ ಇದೆ ಎಂದಾಗ ದೇವರು ಹೇಗೆ ಕಾರಣ ವಾಗುತ್ತಾರೆ .
ಕಾರಣ ವಿಲ್ಲದೆ ಯಾವ ಅವಘಡವೂ ನಡೆಯುವುದಿಲ್ಲ . ಅದು ವಿಧಿ ನಿಯಮ ತನ್ನ ಕಾರ್ಯ ತಾನೂ ಮಾಡಿಯೇ ಮಾಡುತ್ತದೆ .
ಸಾವು ಪ್ರತಿ ಜೀವಿಗೂ ಒಂದಲ್ಲಾ ಒಂದು ದಿನ ಬರುತ್ತದೆ
ಇರುವ ವರೆಗೂ ಸಾಮರಸ್ಯದಿಂದ ಬದುಕಿ
ಹರ ಹರ ಮಹಾದೇವ