top of page

KURUKSHETRA WAR 18 DAYS FULL DEATILS IN KANNADA

Apr 29, 2024

5 min read

4

127




ಮಹಾಭಾರತದ 18 ದಿನಗಳ ಮಹಾಯುದ್ಧದ ಸಂಪೂರ್ಣ ವಿವರ


ಮಹಾಭಾರತ ಯುದ್ಧವೆಂದರೆ ಅದೊಂದು 18 ದಿನಗಳ ಹೋರಾಟ, 18 ದಿನಗಳ ಅಧ್ಯಾಯ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ 18 ದಿನಗಳ ಮಹಾಯುದ್ಧದಲ್ಲಿ ಸತ್ತವರ ಲೆಕ್ಕವೇ ಇಲ್ಲ.


ಹಿಂದೂ ಕಾವ್ಯವಾದ ಮಹಾಭಾರತದಲ್ಲಿ ವಿವರಿಸಲ್ಪಟ್ಟ ಯುದ್ಧವಾಗಿದೆ. ಕುರು ಎನ್ನುವ ಭಾರತೀಯ ಸಾಮ್ರಾಜ್ಯದಲ್ಲಿನ ಹಸ್ತಿನಾಪುರ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಲೂ ಪಾಂಡವರು ಮತ್ತು ಕೌರವರ ನಡುವೆ ನಡೆದ ಸಂಘರ್ಷವಾಗಿದೆ. ಕುರುಕ್ಷೇತ್ರ ನಡೆದ ಸ್ಥಳವು ಈಗಿನ ಹರಿಯಾಣವೆಂದು ಕರೆಯಲಾಗುತ್ತದೆ. ಕುರುಕ್ಷೇತ್ರ ಯುದ್ಧವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ 18 ದಿನಗಳವರೆಗೆ ನಡೆಯಿತು. ಈ 18 ದಿನಗಳ ಯುದ್ಧದಲ್ಲಿ ಯಾವೆಲ್ಲಾ ಘಟನೆಗಳು ಸಂಭವಿಸಿದೆ ತಿಳಿದುಕೊಳ್ಳಿ



  • 1ನೇ ದಿನ - ಪಾಂಡವರು ಭಾರಿ ನಷ್ಟ ಅನುಭವಿಸಿದರು

  • 2ನೇ ದಿನ - ಕೌರವರು ಭಾರಿ ನಷ್ಟವನ್ನು ಅನುಭವಿಸಿದರು

  • 3ನೇ ದಿನ - ಆಕಾಶ ಶಸ್ತ್ರಾಸ್ತ್ರಗಳ ಬಳಕೆ

  • 4ನೇ ದಿನ - ದುರ್ಯೋಧನನಿಗೆ ಶಾಂತಿಯಿಂದಿರಲು ಭೀಷ್ಮನ ಸಲಹೆ

  • 5ನೇ ದಿನ - ಸತ್ಯಕಿಯನ್ನು ರಕ್ಷಿಸಿದ ಭೀಮ

  • 6ನೇ ದಿನ - ಕೌರವರ ಸೋಲು

  • 7ನೇ ದಿನ - ಕೌರವರಿಗೆ ಜಯ

  • 7ನೇ ದಿನದ ಯುದ್ಧದಲ್ಲಿ ಕೌರವರು ಜಯಶಾಲಿಗಳಾಗುತ್ತಾರೆ.

  • 8ನೇ ದಿನ - ಕೌರವರಿಗೆ ಮತ್ತೆ ಸೋಲು

  • 9ನೇ ದಿನ - ಯುದ್ಧದಲ್ಲಿ ಶಿಖಂಡಿಯನ್ನು ಬಳಸುವಂತೆ ಯುಧಿಷ್ಠಿರನಿಗೆ ಭೀಷ್ಮನ ಸಲಹೆ

  • 10ನೇ ದಿನ - ಭೀಷ್ಮನ ಮರಣ



  • 11 ನೇ ದಿನ - ಅರ್ಜುನ ದ್ರೋಣರನ್ನು ಸೋಲಿಸಿದನು

  • 12ನೇ ದಿನ - ಅರ್ಜುನ ಮತ್ತು ಭಾಗದತ್ತರ ಕದನ

  • 13 ನೇ ದಿನ - ಅಭಿಮನ್ಯುವಿನ ಮರಣ

  • 14 ನೇ ದಿನ - ಘಟೋದ್ಗಜನಿಂದ ಕರ್ಣ ವಾಸವಿ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ

  • 15ನೇ ದಿನ - ದೃಷ್ಟದ್ಯುಮ್ನನು ದ್ರೋಣನನ್ನು ಕೊಂದನು

  • 15 ನೇ ದಿನ ದ್ರೋಣರು ವಿರಾಟ ಮತ್ತು ದ್ರುಪದನನ್ನು ಕೊಲ್ಲುತ್ತಾನೆ

  • 16 ನೇ ದಿನ - ಭೀಮನು ದುಶ್ಯಾಸನನ್ನು ಕೊಂದನು

  • 17 ನೇ ದಿನ - ಅರ್ಜುನನು ಕರ್ಣನನ್ನು ಕೊಂದನು

  • 18ನೇ ದಿನ - ದುರ್ಯೋಧನನ ಮರಣ





1ನೇ ದಿನ - ಪಾಂಡವರು ಭಾರಿ ನಷ್ಟ ಅನುಭವಿಸಿದರು

ಭೀಷ್ಮನು ಕೌರವ ಸೈನ್ಯದೊಂದಿಗೆ ಪಾಂಡವರ ವಿರುದ್ಧ ಧ್ವಜವನ್ನು ಎತ್ತುವ ಮೂಲಕ ಹಾಗೂ ಭೀಮನು ಪಾಂಡವ ಸೈನ್ಯವನ್ನು ಮುನ್ನಡೆಸುವ ಮೂಲಕ ಯುದ್ಧವು ಆರಂಭವಾಯಿತು. ದುಶ್ಯಾಸನನು ನಕುಲನೊಂದಿಗೆ, ಯುಧಿಷ್ಠಿರನು ಶಲ್ಯನೊಂದಿಗೆ ದೃಷ್ಟದ್ಯುಮ್ನನು ದ್ರೋಣನೊಂದಿಗೆ

ಪಾಂಚಲದ ರಾಜನು ಸಿಂಧ್‌ ರಾಜನೊಂದಿಗೆ ಯುದ್ಧವನ್ನು ಮಾಡಲು ಆರಂಭಿಸಿದರು. ಮೊದಲ ದಿನವೇ ಯುದ್ಧ ಭೀಕರವಾಗಿತ್ತು. ಮೊದಲ ದಿನದ ಯುದ್ಧದಲ್ಲೇ ವಿರಾಟನ ಮಗ ಉತ್ತರಾನನ್ನು ಕೊಲ್ಲಲಾಯಿತು ಮತ್ತು ಪಾಂಡವರು ಈ ದಿನ ನಷ್ಟವನ್ನು ಅನುಭವಿಸಬೇಕಾಯಿತು


2ನೇ ದಿನ - ಕೌರವರು ಭಾರಿ ನಷ್ಟವನ್ನು ಅನುಭವಿಸಿದರು

ಗೆಲ್ಲುತ್ತೇವೆನ್ನುವ ಆತ್ಮವಿಶ್ವಾಸದಿಂದ ಎರಡನೇ ದಿನವೂ ಪಾಂಡವರು ಕೌರವರ ವಿರುದ್ಧ ದಂಗೆಯೆದ್ದರು. ಪಾಂಡವರನ್ನು ಹೇಗಾದರೂ ಸೋಲಿಸಲು ದೊಡ್ಡ ಉಪಾಯವನ್ನೇ ಮಾಡಬೇಕೆಂದು ಅರ್ಜುನನು ಅರಿತುಕೊಂಡನು. ಆದ್ದರಿಂದ ಅರ್ಜುನನು ಭೀಷ್ಮನನ್ನು ಕೊಲ್ಲಲು ಮುಂದಾಗುತ್ತಾನೆ. ಶ್ರೀಕೃಷ್ಣನು ತನ್ನ ಕೌಶಲ್ಯದಿಂದ ಭೀಷ್ಮನ ರಥವನ್ನು ಗುರುತಿಸಿ ಅರ್ಜುನನ್ನು ಅವನತ್ತ ಕಳುಹಿಸುತ್ತಾನೆ. ಕೌರವ ಸೇನೆ ಭೀಷ್ಮರನ್ನು ರಕ್ಷಿಸಲು ಸುತ್ತುವರಿದಿತ್ತು. ಈ ಸಮಯದಲ್ಲಿ ಅರ್ಜುನ ಮತ್ತು ಭೀಷ್ಮರ ವಿರುದ್ಧ ಯುದ್ಧ ಆರಂಭವಾಯಿತು.

ಮತ್ತೊಂದೆಡೆ ದ್ರೋಣರ ಮತ್ತು ದೃಷ್ಟದ್ಯುಮ್ನನ ವಿರುದ್ಧ ಯುದ್ಧ ಆರಂಭವಾಗಿ ದ್ರೋಣರು ದೃಷ್ಟದ್ಯುಮ್ನನನ್ನು ಸೋಲಿಸಿದರು. ಆದರೆ ಭೀಮನ ಹಸ್ತಕ್ಷೇಪದಿಂದ ಆತನ ಜೀವ ಪಾರಾಯಿತು. ಇತ್ತ ದುರ್ಯೋದನನು ಭೀಮನನ್ನು ಕೊಲ್ಲಲು ಕಳಿಂಗ ರಾಜನೊಂದಿಗೆ ಆತನ ಸೈನ್ಯವನ್ನು ಕಳುಹಿಸಿದನು. ಆದರೆ ಭೀಮನು ಕಳಿಂಗ ಪಡೆಯನ್ನು ಸೋಲಿಸಿದನು ಇದನ್ನು ಕಂಡ ಭೀಷ್ಮನು ಕಳಿಂಗ ಪಡೆಯನ್ನು ರಕ್ಷಿಸಲು ಮುಂದಾಗುತ್ತಾನೆ. ಆಗ ಭೀಮನ ಸಹಾಯಕ ಸತ್ಯಕಿ ಭೀಷ್ಮನ ರಥಕ್ಕೆ ಬಿಲ್ಲನ್ನು ಹೊಡೆಯುತ್ತಾನೆ. ಭೀಷ್ಮನ ರಥದ ಕುದುರೆಗಳು ನಿಯಂತ್ರಣ ತಪ್ಪಿ ಭೀಷ್ಮನನ್ನು ಯುದ್ಧಭೂಮಿಯಿಂದ ಕೊಂಡೊಯ್ಯುತ್ತದೆ. ಇದರಿಂದ ಕೌರವ ಸೇನೆಯು ಎರಡನೇ ದಿನದ ಕುರುಕ್ಷೇತ್ರ ಯುದ್ಧದಲ್ಲಿ ದೊಡ್ಡ ನಷ್ಟವನ್ನು ಅನುಭವಿಸಬೇಕಾಯಿತು





3ನೇ ದಿನ - ಆಕಾಶ ಶಸ್ತ್ರಾಸ್ತ್ರಗಳ ಬಳಕೆ

ಭೀಷ್ಮನು ಕೌರವ ಪಡೆಯ ಮುಂಭಾಗವನ್ನು ಹದ್ದಿನ ರಚನೆಯಲ್ಲಿ ಮುಂದುವೆಸಿದನು. ದುರ್ಯೋಧನನು ತನ್ನ ಪಡೆಯನ್ನು ರಕ್ಷಿಸುವತ್ತ ಗಮನ ಹರಿಸಿದನು. ಭೀಮನು ತನ್ನ ಸೈನ್ಯವನ್ನು ಅರ್ಧ ಚಂದ್ರನ ಆಕಾರದಲ್ಲಿ ರಚಿಸಿಕೊಂಡು ಯುದ್ಧವನ್ನು ಆರಂಭಿಸಿದನು. ಅಭಿಮನ್ಯು ಮತ್ತು ಸತ್ಯಕಿ ಜೊತೆಯಾಗಿ ಗಾಂಧಾರ ಪಡೆಯನ್ನು ಹೊಡೆದುರುಳಿಸಿದರು. ಭೀಮ ಮತ್ತು ಅವನ ಮಗ ಘಟೋದ್ಗಜ ದುರ್ಯೋಧನನ ಮೇಲೆ ಹಲ್ಲೆ ನಡೆಸಿದರು. ಭೀಮನ ಬಾಣಗಳು ದುರ್ಯೋಧನನತ್ತ ಮುಖ ಮಾಡಿರುವುದನ್ನು ಕಂಡ ಆತನ ಸೈನ್ಯವು ದುರ್ಯೋಧನನ್ನು ರಕ್ಷಿಸುವಲ್ಲಿ ಮುಂದಾದರು. ಕೌರವರ ಕೆಂಗಣ್ಣು ಅರ್ಜುನನ ಮೇಲೆ ಬಿದ್ದಿತು. ಸಾವಿರಾರು ಬಾಣಗಳು ಅರ್ಜುನನ್ನು ಹತ್ಯೆಗೈಯಲು ಬರುತ್ತಿದ್ದಂತೆ ಅವನು ತನ್ನ ಸುತ್ತಲೂ ಬಾಣಗಳ ಕೋಟೆಯನ್ನು ಕಟ್ಟಿಕೊಂಡು ತನ್ನನ್ನು ತಾನು ರಕ್ಷಿಸಿಕೊಂಡನು.


4ನೇ ದಿನ - ದುರ್ಯೋಧನನಿಗೆ ಶಾಂತಿಯಿಂದಿರಲು ಭೀಷ್ಮನ ಸಲಹೆ


5ನೇ ದಿನ - ಸತ್ಯಕಿಯನ್ನು ರಕ್ಷಿಸಿದ ಭೀಮ

ಬಾಣದ ಹೊಡೆತಕ್ಕೆ ಒಳಗಾಗಿದ್ದರು ಭೀಮ 5 ನೇ ದಿನ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ. ಭೀಷ್ಮನ ದಾಳಿಯಿಂದ ಪಾಂಡವ ಸೇನೆ ಮತ್ತಷ್ಟು ತತ್ತರಿಸಿತು. ಅರ್ಜುನನ್ನು ಕೊಲ್ಲಲು ದುರ್ಯೋಧನ ಕಳುಹಿಸಿದ್ದ ಸಾವಿರಾರು ಸೈನಿಕರನ್ನು ಅರ್ಜುನ ಒಂದೇ ಕ್ಷಣದಲ್ಲಿ ಹತ್ಯೆಗೈಯ್ಯುತ್ತಾನೆ. ಭೀಮನು ಭೀಷ್ಮರೊಂದಿಗೆ ಯುದ್ಧದಲ್ಲಿ ತೊಡಗಿದ್ದಾಗ, ದ್ರೋಣನು ಸತ್ಯಕಿಯ ಮೇಲೆ ಯುದ್ಧ ಮಾಡುತ್ತಾನೆ. ಇನ್ನೇನು ದ್ರೋಣರಿಂದ ಸತ್ಯಕಿ ಸೋಲನುಭವಿಸಬೇಕೆನ್ನುವಷ್ಟರಲ್ಲಿ ಭೀಮನು ದ್ರೋಣರನ್ನು ಓಡಿಸಿ, ಸತ್ಯಕಿಯನ್ನು ಕಾಪಾಡುತ್ತಾನೆ.

6ನೇ ದಿನ - ಕೌರವರ ಸೋಲು -7ನೇ ದಿನ - ಕೌರವರಿಗೆ ಜಯ

8ನೇ ದಿನ - ಕೌರವರಿಗೆ ಮತ್ತೆ ಸೋಲು

9ನೇ ದಿನ - ಯುದ್ಧದಲ್ಲಿ ಶಿಖಂಡಿಯನ್ನು ಬಳಸುವಂತೆ ಯುಧಿಷ್ಠಿರನಿಗೆ ಭೀಷ್ಮನ ಸಲಹೆ

ಭೀಷ್ಮನು ತನ್ನ ಬಾಣಗಳಿಂದ ಪಾಂಡವ ಸೇನೆಯನ್ನು ವಧಿಸುತ್ತಿರುವುದನ್ನು ಹಾಗೂ ಅರ್ಜುನನ ಸೈನ್ಯದ ಹಲವಾರು ಸೈನಿಕರನ್ನು ಕೊಂದಿರುವುದನ್ನು ಕೃಷ್ಣನು ನೋಡುತ್ತಾನೆ. ಭೀಷ್ಮನ ಯುದ್ಧ ಚಾತುರ್ಯವನ್ನು ಕಂಡ ಕೃಷ್ಣನು ಭೀಷ್ಮನೊಬ್ಬನೇ ಪಾಂಡವ ಸೈನ್ಯವನ್ನು ಕೊಲ್ಲುತ್ತಾನೆಂದು ಅರಿತುಕೊಳ್ಳುತ್ತಾನೆ. ಇತ್ತ ಅರ್ಜುನನು ಭೀಷ್ಮ ಅಷ್ಟು ಜನರನ್ನು ಸೋಲಿಸಿದರೂ ಸೌಮ್ಯವಾಗಿ ಯುದ್ಧ ಮಾಡುತ್ತಿರುವುದನ್ನು ಕಂಡ ಕೃಷ್ಣನು ಕೋಪಗೊಂಡು ರಥದ ಚಕ್ರವನ್ನು ತನ್ನ ಕೈಯಲ್ಲಿ ಹಿಡಿದು ಭೀಷ್ಮನನ್ನು ಕೊಲ್ಲಲು ಮುಂದಾಗುತ್ತಾನೆ. ಕೃಷ್ಣನನ್ನು ಕಂಡಾಕ್ಷಣ ಭೀಷ್ಮನು ಕೃಷ್ಣನಿಗೆ ಎರಡೂ ಕೈಗಳನ್ನು ಮುಗಿದು, ನಾನು ನಿಮ್ಮ ಕೈಯಿಂದ ಸಾಯಲು ಸಿದ್ಧನಿದ್ದೇನೆಂದು ಹೇಳುತ್ತಾನೆ. ಕೃಷ್ಣನ ಕೈಯಲ್ಲಿ ರಥದ ಚಕ್ರವನ್ನು ಕಂಡು ಅರ್ಜುನನು ಕೃಷ್ಣನತ್ತ ಧಾವಿಸಿ ಆತನನ್ನು ಸಮಾಧಾನಗೊಳಿಸುತ್ತಾನೆ. ಭೀಷ್ಮನು ಎಂದಿಗೂ ನಪುಂಸಕನ ಮೇಲೆ ಕೈಯೆತ್ತುವುದಿಲ್ಲವೆಂದು ಅರಿತಿದ್ದ ಕೃಷ್ಣನು ಯುದ್ಧರಂಗದಲ್ಲಿ ನಪುಂಸಕನನ್ನು ಆಯೋಜಿಸಲು ಸೂಚಿಸುತ್ತಾನೆ. ಇನ್ನು ಕೆಲವು ಮೂಲಗಳ ಪ್ರಕಾರ, ರಾತ್ರಿ ವೇಳೆ ಯುಧಿಷ್ಠಿರನು ಭೀಷ್ಮನ ಶಿಬಿರಕ್ಕೆ ಭೇಟಿ ನೀಡಿ ಆತನಿಂದ ಆತನನ್ನೇ ಕೊಲ್ಲುವ ತಂತ್ರವನ್ನು ತಿಳಿದುಕೊಂಡನೆಂದು ಹೇಳಲಾಗುತ್ತದೆ.





10ನೇ ದಿನ - ಭೀಷ್ಮನ ಮರಣ

ಭೀಷ್ಮನಿಂದ ಪಾಂಡವ ಸೇನೆಯನ್ನು ರಕ್ಷಿಸಲು ಅರ್ಜುನನು ತನ್ನ ರಥದಲ್ಲಿ ಶಿಖಂಡಿಯನ್ನು ಕುಳಿಸಿಕೊಳ್ಳುತ್ತಾನೆ. ಭೀಷ್ಮನು ಶಿಖಂಡಿಯ ಮೇಲೆ ಎಂದಿಗೂ ಕೈ ಮಾಡುವುದಿಲ್ಲವೆಂದು ಶಪಥ ಮಾಡಿದ್ದರಿಂದ ಅರ್ಜುನನು ಈ ಉಪಾಯವನ್ನು ಮಾಡುತ್ತಾನೆ. ಶಿಖಂಡಿಯ ಬಾಣಗಳು ಭೀಷ್ಮನ ಎದೆಯನ್ನು ಚುಚ್ಚಿತು. ನಂತರ ಅರ್ಜುನನು ತನ್ನ ಬಿಲ್ಲಿನಿಂದ ಭೀಷ್ಮನ ಹೃದಯದ ಸೂಕ್ಷ್ಮ ಭಾಗಗಳಿಗೆ ಬಾಣವನ್ನು ಹೂಡಿದನು. ಭೀಷ್ಮನ ಎದೆಗೆ ಬಾಣಗಳು ಚುಚ್ಚಿಕೊಳ್ಳುತ್ತಿದ್ದಂತೆ ಕೌರವರನ್ನು ಯುದ್ಧ ಭೂಮಿಯಿಂದ ಓಡಿಸುತ್ತಾರೆ. ಪಾಂಡವರು ಭೀಷ್ಮನನ್ನು ಸುತ್ತುವರಿದು ಮತ್ತಷ್ಟು ಬಾಣವನ್ನು ಅವರತ್ತ ಹೂಡುತ್ತಾರೆ, ಬಾಣದ ಹೊಡೆತಗಳಿಂದ ಭೀಷ್ಮರು ರಥದಿಂದ ಕೆಳಗೆ ಬೀಳುತ್ತಾರೆ

ಹಸ್ತಿನಾಪುರವನ್ನು ಎಲ್ಲಾ ದಿಕ್ಕುಗಳಿಂದ ಭದ್ರಗೊಳಿಸುವವರೆಗೆ ತಾನು ಸಾಯುವುದಿಲ್ಲವೆಂದು ಭೀಷ್ಮರು ಅವರ ತಂದೆ ಶಾಂತನುಗೆ ಮಾತನ್ನು ನೀಡಿರುವುದರಿಂದ ಇಚ್ಛಾ ಮರಣವನ್ನು ತೆಗೆದುಕೊಳ್ಳುತ್ತಾನೆ. ಭೀಷ್ಮರ ಮರಣಕ್ಕೆ ಗೌರವವನ್ನು ಸೂಚಿಸಲು ಎರಡೂ ಪಡೆಗಳು ಯುದ್ಧವನ್ನು ನಿಲ್ಲಿಸಿ, ಭೀಷ್ಮರನ್ನು ಬಿಲ್ಲಿನ ಹಾಸಿಗೆಯ ಮೇಲೆ ಮಲಗಿಸುತ್ತಾರೆ.





11 ನೇ ದಿನ - ಅರ್ಜುನ ದ್ರೋಣರನ್ನು ಸೋಲಿಸಿದನು

11 ನೇ ದಿನ ಭೀಷ್ಮನಿಗೆ ಯುದ್ಧಭೂಮಿಯಲ್ಲಿ ಹೋರಾಡಲು ಸಾಧ್ಯವಾಗದ ಕಾರಣ ಕರ್ಣನು ಯುದ್ಧ ಭೂಮಿಗೆ ಬರುತ್ತಾನೆ. ಕರ್ಣನ ಸಲಹೆಯ ಮೇರೆಗೆ ದ್ರೋಣರನ್ನು ಕೌರವ ಪಡೆಗಳ ಸರ್ವೋಚ್ಛ ಸೇನಾಧಿಪತಿಯಾಗಿ ನೇಮಿಸಲಾಗುತ್ತದೆ. ಯುಧಿಷ್ಠಿರನನ್ನು ಜೀವಂತವಾಗಿ ಸೆರೆಹಿಡಿಯುವಂತೆ ದುರ್ಯೋಧನನನು ದ್ರೋಣರಲ್ಲಿ ಕೇಳಿಕೊಳ್ಳುತ್ತಾನೆ. 11 ನೇ ದಿನ ದ್ರೋಣರು ಅರ್ಜುನನಿಂದ ತನ್ನ ಸಹೋದರರನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಂತೆ ತ್ರಿಗಾರ್ತಿಗಳನ್ನು ರಚಿಸುತ್ತಾರೆ. ಆದ್ದರಿಂದ 11ನೇ ದಿನ ಯುದ್ಧ ಯೋಜನೆಗಳು ಆರಂಭವಾದವು. ದ್ರೋಣರು ಯುಧಿಷ್ಠಿರನ ಬಿಲ್ಲನ್ನು ತುಂಡರಿಸಿದರು. ಇನ್ನೇನು ಪಾಂಡವ ಸೇನೆ ಸೋಲುವಷ್ಟರಲ್ಲಿ ಅರ್ಜುನನು ಯುದ್ಧ ಭೂಮಿಗೆ ಧಾವಿಸಿ, ದ್ರೋಣರನ್ನು ಸೋಲಿಸುತ್ತಾನೆ.





12ನೇ ದಿನ - ಅರ್ಜುನ ಮತ್ತು ಭಾಗದತ್ತರ ಕದನ

13 ನೇ ದಿನ - ಅಭಿಮನ್ಯುವಿನ ಮರಣ

ದ್ರೋಣರು ಪಾಂಡವರನ್ನು ಸೋಲಿಸಲು ಚಕ್ರವ್ಯೂಹವನ್ನು ರಚಿಸುತ್ತಾರೆ. ಪಾಂಡವರಲ್ಲಿ ಕೃಷ್ಣನಿಗೆ ಹಾಗೂ ಅರ್ಜುನನಿಗೆ ಹೊರತುಪಡಿಸಿ ಬೇರಾರಿಗೂ ಕೂಡ ಚಕ್ರವ್ಯೂಹವನ್ನು ಭೇದಿಸುವ ವಿದ್ಯೆ ತಿಳಿದಿರುವುದಿಲ್ಲ. ಆದರೆ ಅಭಿಮನ್ಯು ತಾಯಿಯ ಗರ್ಭದಲ್ಲಿದ್ದಾಗ ಕೃಷ್ಣನು ಅವನಿಗೆ ಚಕ್ರವ್ಯೂಹವನ್ನು ಭೇದಿಸುವ ಬಗ್ಗೆ ತಿಳಿಸಿದ್ದನು. ಆದರೆ ಚಕ್ರವ್ಯೂಹದಿಂದ ಹೊರ ಬರುವ ಕಲೆಯನ್ನು ಕಲಿಸುವಷ್ಟರಲ್ಲಿ ಕೃಷ್ಣ ಅರ್ಜುನನ್ನು ತಡೆಯುತ್ತಾನೆ ಇದರಿಂದಾಗಿ ಅಭಿಮನ್ಯುವಿಗೆ ಚಕ್ರವ್ಯೂಹದಿಂದ ಹೊರಬರುವ ಕಲೆ ತಿಳಿದಿರುವುದಿಲ್ಲ. ಕೆಲವೊಂದು ಕಥೆಯ ಪ್ರಕಾರ ಅಭಿಮನ್ಯು ಗರ್ಭದಲ್ಲಿದ್ದಾಗ ಅರ್ಜುನ ಚಕ್ರವ್ಯೂಹ ಭೇದಿಸುವ ಕಲೆಯನ್ನು ಕಲಿಸುವಷ್ಟರಲ್ಲಿ ಅಭಿಮನ್ಯುವಿನ ತಾಯಿ ನಿದ್ರೆಗೆ ಜಾರುತ್ತಾಳೆ ಆದ್ದರಿಂದ ಅವನು ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ.

ಪಾಂಡವರ ಕೋರಿಕೆಯ ಮೇರೆಗೆ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಲು ಮುಂದಾಗುತ್ತಾನೆ. ಆತನು ಚಕ್ರವ್ಯೂಹವನ್ನು ಪ್ರವೇಶಿಸಿ ದ್ರೋಣನನ್ನು, ಕರ್ಣನನ್ನು, ಅಶ್ವತ್ಥಾಮನನ್ನು ಸೇರಿದಂತೆ ಇನ್ನುಳಿದ ಸೇನೆಯನ್ನು ಸೋಲಿಸುತ್ತಾನೆ ಆದರೆ ಆತನಿಗೆ ಆ ವ್ಯೂಹದಿಂದ ಹೊರಬರಲು ತಿಳಿಯದೇ ಯುದ್ಧಭೂಮಿಯಲ್ಲಿ ಕೌರವರಿಂದ ಸಾಯುತ್ತಾನೆ.




14 ನೇ ದಿನ - ಘಟೋದ್ಗಜನಿಂದ ಕರ್ಣ ವಾಸವಿ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ

15ನೇ ದಿನ - ದೃಷ್ಟದ್ಯುಮ್ನನು ದ್ರೋಣನನ್ನು ಕೊಂದನು

15 ನೇ ದಿನದ ಯುದ್ಧವು ಆರಂಭವಾಗುತ್ತದೆ. ಯುದ್ಧದಲ್ಲಿ ದ್ರೋಣರು ಮೇಲುಗೈ ಸಾಧಿಸುತ್ತಾರೆ. ದ್ರೋಣರು 15 ನೇ ದಿನ ವಿರಾಟ ಮತ್ತು ದ್ರುಪದನನ್ನು ಕೊಲ್ಲುತ್ತಾನೆ. ದ್ರೋಣರನ್ನು ಹೀಗೆ ಬಿಟ್ಟರೆ ಪಾಂಡವರು ಅಂತ್ಯಗೊಳ್ಳುತ್ತಾರೆಂದು ತಿಳಿದ ಕೃಷ್ಣನು ಮೋಸದ ಆಟವನ್ನು ಆಡುತ್ತಾನೆ. ಕೃಷ್ಣನ ಮೋಸವನ್ನು ಒಪ್ಪಲೇಬೇಕಾದ ಸ್ಥಿತಿಯಲ್ಲಿದ್ದ ಸತ್ಯವಂತ ಯುಧಿಷ್ಠಿರನು ಮನಸ್ಸಿಲ್ಲದೇ ಇದಕ್ಕೆ ಒಪ್ಪುತ್ತಾನೆ. ಕೃಷ್ಣನು ಭೀಮನ ಬಳಿ ಅಶ್ವತ್ಥಾಮ ಎನ್ನುವ ಆನೆಯನ್ನು ಕೊಲ್ಲುವಂತೆ ಹೇಳುತ್ತಾನೆ. ಭೀಮನು ಆನೆಯನ್ನು ಕೊಂದು ದ್ರೋಣರಿಗೆ ಕೇಳುವಂತೆ ಅಶ್ವತ್ಥಾಮ ಸತ್ತನೆಂದು ಕೂಗುತ್ತಾನೆ. ಇದನ್ನು ಕೇಳಿದ ದ್ರೋಣರು ತನ್ನ ಮಗನೇ ಸತ್ತನೆಂದು ತಿಳಿದು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಯುದ್ಧಭೂಮಿಯಲ್ಲಿ ದೇಹವನ್ನು ತ್ಯಜಿಸಲೆಂದು ಧ್ಯಾನಕ್ಕೆ ಹೋಗುತ್ತಾರೆ. ಆಗ ದೃಷ್ಟಧ್ಯುಮ್ನನು ದ್ರೋಣರನ್ನು ಹತ್ಯೆಗೈಯ್ಯುತ್ತಾನೆ.

16 ನೇ ದಿನ - ಭೀಮನು ದುಶ್ಯಾಸನನ್ನು ಕೊಂದನು

17 ನೇ ದಿನ - ಅರ್ಜುನನು ಕರ್ಣನನ್ನು ಕೊಂದನು

17 ನೇ ದಿನದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ಕರ್ಣನನ್ನು ಕೊಲ್ಲುತ್ತಾನೆ. 17 ನೇ ದಿನ ಯುದ್ಧ ಆರಂಭವಾಗುತ್ತಿದ್ದಂತೆ ಕರ್ಣನು ಪಾಂಡವ ಸಹೋದರರಾದ ನಕುಲ, ಸಹದೇವ ಮತ್ತು ಯುಧಿಷ್ಠಿರನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಆದರೆ ಅವರ ಪ್ರಾಣಕ್ಕೆ ಅಪಾಯವನ್ನು ಮಾಡುವುದಿಲ್ಲ. ಯುದ್ಧಭೂಮಿಯಲ್ಲಿ ಕರ್ಣ ಯುಧಿಷ್ಠಿರನನ್ನು ತೀವೃವಾಗಿ ಹಾನಿಗೊಳಿಸುತ್ತಾನೆ. ಯುಧಿಷ್ಠಿರನನ್ನು ನೋಡಲೆಂದು ಅರ್ಜುನ ಬರುತ್ತಾನೆ. ಆಗ ಯುಧಿಷ್ಟಿರನು ಅರ್ಜುನನ್ನು ಕುರಿತು ನೀನು ಕರ್ಣನಿಗೆ ಹೆದರಿ ಯುದ್ಧ ಭೂಮಿಯಿಂದ ಓಡಿಹೋದೆಯೆಂದು ಅವಮಾನಿಸುತ್ತಾನೆ. ಕೋಪಗೊಂಡ ಅರ್ಜುನನು ಯುಧಿಷ್ಠಿರನ ವಿರುದ್ಧ ಕತ್ತಿಯನ್ನು ಎಳೆಯುತ್ತಾನೆ. ಆಗ ಕೃಷ್ಣನು ಬುದ್ಧಿವಾದವನ್ನು ಹೇಳಿ ಇಬ್ಬರನ್ನು ಸಮಾಧಾನಗೊಳಿಸುತ್ತಾನೆ. ನಂತರ ಅರ್ಜುನ ಮತ್ತು ಕರ್ಣನ ವಿರುದ್ಧ ಯುದ್ಧ ಆರಂಭವಾಗುತ್ತದೆ. ಕರ್ಣ ತನ್ನ ಕವಚವನ್ನು ಮತ್ತು ಕುಂಡಲವನ್ನು ಇಂದ್ರನು ಭಿಕ್ಷೆ ಕೇಳಿದಾಗ ಆತನಿಗೆ ನೀಡಿರುತ್ತಾನೆ. ಇದರಿಂದಾಗಿ ಅರ್ಜುನನಿಗೆ ಕರ್ಣನನ್ನು ಕೊಲ್ಲಲು ಸುಲಭವಾಗುತ್ತದೆ. ಕರ್ಣನ ರಥದ ಚಕ್ರವು ಮಣಿನಲ್ಲಿ ಸಿಲುಕಿಕೊಂಡಾಗ ಕರ್ಣನು ವಿಶ್ರಾಂತಿಯನ್ನು ಕೇಳುತ್ತಾನೆ. ಆಗ ಅರ್ಜುನನು ಕೃಷ್ಣನ ಮಾತಿನಿಂದ ಕರ್ಣನ ಶಿರಚ್ಛೇದ ಮಾಡುತ್ತಾನೆ.


18ನೇ ದಿನ - ದುರ್ಯೋಧನನ ಮರಣ


ಕೊನೆಯ ದಿನ

ಕೊನೆಯಲ್ಲಿ ಯುಧಿಷ್ಠಿರನನ್ನು ಹಸ್ತಿನಾಪುರದ ರಾಜನಾಗಿ ನೇಮಕ ಮಾಡಲಾಯಿತು. 36 ವರ್ಷಗಳ ನಂತರ ಯುಧಿಷ್ಠಿರನು ಸಿಂಹಾಸನವನ್ನು ತ್ಯಜಿಸಿದನು. ಕೃಷ್ಣನ ನಿಧನದ ನಂತರ ಅರ್ಜುನನ ಮೊಮ್ಮಗ ರಾಜ ಪರೀಕ್ಷಿತ್‌ಗೆ ಪಟ್ಟವನ್ನು ನೀಡಲಾಯಿತು. ನಂತರ ಯುಧಿಷ್ಠಿರನು ದ್ರೌಪದಿ ಮತ್ತು ಮತ್ತು ತನ್ನ ನಾಲ್ವರು ಸಹೋದರರೊಂದಿಗೆ ಸ್ವರ್ಗಕ್ಕೆ ತೆರಳಲು ಇಚ್ಛಿಸುತ್ತಾರೆ. ಆದರೆ ಪ್ರಯಾಣದಲ್ಲಿ ದ್ರೌಪದಿ ಮತ್ತು ಆತನ ನಾಲ್ವರು ಸಹೋದರರು ಸಾವನ್ನಪ್ಪುತ್ತಾರೆ. ಕೊನೆಗೆ ಧರ್ಮನಿಷ್ಠ ಯುಧಿಷ್ಠಿರ ಮಾತ್ರ ಸ್ವರ್ಗವನ್ನು ಸೇರುತ್ತಾನೆ.



ಕರ್ಣ ಒಂದಾದರೂ ಯುದ್ಧ ಗೆದ್ದನೇ..? ಇಲ್ಲ.

ದ್ರುಪದನ ಗರ್ವಭಂಗ, ಉತ್ತರ ಗೋಗ್ರಹಣ, ಗಂಧರ್ವ ಚಿತ್ರಸೇನ ಯುದ್ಧ.. ಒಂದಾದರೂ ..?!!

ಇನ್ನೂ ಸಿನಿಮಾ, ಧಾರಾವಾಹಿ ನೋಡಿ ಕರ್ಣ ದ್ರೌಪದಿ ಸ್ವಯಂವರದಲ್ಲಿ ಅಪಮಾನಿತನಾದ ಅಂತ ಹೇಳ್ತಾರೆ..!! ಇದು ಕೂಡ ಸುಳ್ಳು. ಆತ ಜಯಿಸಲಿಲ್ಲ ಅಷ್ಟೇ..

ಅರ್ಜುನ ಮೋಸದಿಂದ ಕೊಂದ!!. ಕರ್ಣ ಅಭಿಮನ್ಯುವಿಗೆ ಮಾಡಿದ್ದೇನು..?. ದ್ರೌಪದಿಯ ವಸ್ತ್ರಾಪಹರಣ ಮಾಡಿ ಅಂದವನೆ ಕರ್ಣ

ಇನ್ನೂ ದ್ರೋಣ, ಆಕಡೆ ಬ್ರಾಹ್ಮಣನಾಗಲಿಲ್ಲ, ಈ ಕಡೆ ಗೆದ್ದ ಅರ್ಧ ಪಾಂಚಾಲಕ್ಕೆ ಹೋಗಲಿಲ್ಲ..!!

ದೃತರಾಷ್ಟ್ರ ಭಾಗ 2 ಈತ. ಒಬ್ಬನೇ ಮಗ ಅಂತ ಕೇಳಿದಕ್ಕೆಲ್ಲಾ ತಲೆಯಾಡಿಸುತ್ತಿದ.

ಇಲ್ಲೂ ಬಲಹೀನತೆಯೇ ಮುನ್ನೆಲೆಗೆ ಬಂತು. ನಿಜ, ಅಶ್ವತ್ಥಾಮ ಹತ ಕುಂಜರಹ. ಆದರೆ ಆ ಕ್ಷಣವೇ ಅವ್ರು ಶಸ್ತ್ರ ತ್ಯಾಗ ಮಾಡಲ್ಲ.

ಈತ ಮೊದಲು ಹೇಳೋದೇ ಕೃಷ್ಣಾರ್ಜುನರನ್ನ ದೂರ ಕಳಿಸಿ, ನಾನು ಯುಧಿಷ್ಠಿರನ ಸೆರೆಹಿಡಿಯುವೆ ಎಂದು. ಈಗ ಹೇಳಿ ದ್ರೋಣನ ಪರಾಕ್ರಮ. ಅದನ್ನೇ ಮಾಡಿದ್ದು ಅಲ್ಲವೇ..?


ಹೀಗೆ 18 ದಿನಗಳ ಹೋರಾಟದಲ್ಲಿ ಕೊನೆಗೆ ಧರ್ಮಕ್ಕೆ ಜಯ ಸಿಗುತ್ತದೆ

ಅದರಿಂದ ಧರ್ಮ ಇದ್ದ ಕಡೆ ಜಯ ಇರುವುದು ನಿಜ


ಧನ್ಯವಾದಗಳು ಎಲ್ಲರಿಗೂ








Apr 29, 2024

5 min read

4

127

bottom of page