ದೇಶದ ಸಂವಿಧಾನ ಹಾಗೂ ನನ್ನ ವಿಶ್ಲೇಷಣೆ
Apr 26, 2024
4 min read
0
46
ಸಂವಿಧಾನ ಒಂದು ಭಾಗವಲ್ಲ. ಆದರೆ ಅದು ಸಂವಿಧಾನ ರಚನಾಕಾರರ ಮನಸ್ಸನ್ನು ತೆರೆದಿಡುವ ಚಾವಿ ಯಾಗಿದೆ ಮತ್ತು ಅದು ಸಂವಿಧಾನದಲ್ಲಿ ವಿವಿಧ ವಿಧಿಗಳನ್ನು ಮಾಡಿರುವ ಸಾಮಾನ್ಯ ಉದ್ದೇಶಗಳನ್ನು ತೋರಿಸುತ್ತದೆ.
ಭಾರತ ಸಂವಿಧಾನವು ಅಂದಿನ ಕಾನುನು ಮಂತ್ರಿ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಆಗಸ್ಟ್ 27,1947 ರಂದು ರಚಿಸಲ್ಪಟ್ಟ ಸಂವಿಧಾನದ ಕರಡು ಸಮಿತಿ ಯಿಂದ ರೂಪಿತ ವಾಯ್ತು.
ಸಂವಿಧಾನವು ಅಂತಿಮ ರೂಪ ತಳೆದಾಗ ಅದನ್ನು ಸಂವಿಧಾನ ರಚನಾ ಸಭೆಯು ನವೆಂಬರ್ 26, 1949 ರಂದು ವಿಧಿ ಗೊಳಿಸಿ, ಸಹಿ ಮಾಡಿ ಅಂಗೀಕರಿಸಿತು. ಕೊನೆಯದಾಗಿ ಜನವರಿ, 26,1950ರಿಂದ ಭಾರತ ಸಂವಿಧಾನವು ಚಲಾವಣೆಗೆ ಬಂದಿತು.
ನಮ್ಮ ಭಾರತ ಸಂವಿಧಾನ ರಚನೆಗೆ ಹಲವಾರು ದೇಶಗಳ ಸಂವಿಧಾನವನ್ನು ಅದರ ವಿಷಯಗಳನ್ನು ಅಳವಡಿಸಿ ಕೊಂಡಿದೆ .
ನಮ್ಮ ಸಂವಿಧಾನ ರಚನೆಗೆ ಕಾರಣ ವಾದ ಇತರ ಮೂಲಗಳೆಂದರೆ
ಭಾರತ ಸರ್ಕಾರದ ಕಾನೂನು, ಬ್ರಿಟಿಷ್, ಅಮೇರಿಕಾ, ಕೆನಡಾ ಆಸ್ಟ್ರೇಲಿಯ, ಐರ್ ಲ್ಯಾಂಡ್ ಸಂವಿಧಾನವು ಮೂಲವಾಗಿವೆ .
ಭಾರತದ ಪ್ರಜೆಗಳಾಗಿ ನಾವು ಭಾರತವನ್ನು ಒಂದು ಪರಮಾಧಿಕಾರದ, ಸಮಾಜವಾದಿ. ಸರ್ವಧರ್ಮ ಸಮನ್ವಯದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಹಾಗೂ ಅದರ ಸಮಸ್ತ ನಾಗರೀಕರಿಗೆ ÷ಸಾಮಾಜಿಕ , ಆರ್ಥಿಕ ಮತ್ತು ರಾಜಕೀಯ ನ್ಯಾಯ, ಹಾಗೂ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮ ಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶ ಹಾಗೂ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆ ಯನ್ನು ಹಾಗೂ ಅಖಂಡತೆಯನ್ನು ಮೂಡಿಸಿ ಎಲ್ಲರಲ್ಲಿಯೂ ಭ್ರಾತೃತ್ವ ಭಾವನೆಯನ್ನು ಬೆಳಗುವಂತೆ ಶ್ರದ್ದಾಪೂರ್ವಕವಾದ ದೃಢ ಸಂಕಲ್ಪ ಮಾಡಿದವರಾಗಿ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿ ನಿಯಮಿತ ಗೊಳಿಸಿ ನಮಗೆ ನಾವೇ ಅರ್ಪಿಸಿ ಕೊಂಡಿದ್ದೇವೆ.
🔮ನಮ್ಮ ಸಂವಿಧಾನದ ಲಕ್ಷಣಗಳು
1 ಲಿಖಿತ ಸಂವಿಧಾನ
2 ವಯಸ್ಕರ ಮತದಾನ ಪದ್ದತಿ
3 ಗಣತಂತ್ರ ವ್ಯವಸ್ಥೆ
4 ಸಂಸದೀಯ ಮಾದರಿಯ ಸರ್ಕಾರ
5 ಸ್ವತಂತ್ರ ನ್ಯಾಯಾಂಗ
6 ಏಕ ಪೌರತ್ವ
7 ಮೂಲಭೂತ ಹಕ್ಕುಗಳು
8 ಮೂಲಭೂತ ಕರ್ತವ್ಯಗಳು
9 ಪಕ್ಷ ಪದ್ದತಿ
10 ಪಂಚವಾರ್ಷಿಕ ಯೋಜನೆ ವ್ಯವಸ್ಥೆ
ಈ ಮೇಲಿನ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆ.
ನಮ್ಮ ಸಂವಿಧಾನ ಕೆಲವು ಮೂಲಭೂತ ಹಕ್ಕುಗಳನ್ನು ಭಾರತದ ಪ್ರಜೆಗಳಿಗೆ ನೀಡಿದೆ ಅವುಗಳು
1 ಸಮಾನತೆಯ ಹಕ್ಕು - ಇದು 14 ರಿಂದ 18 ನೆಯ ವಿಧಿ. ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆ. ಸಾರ್ವಜನಿಕ ಸೇವೆಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ
2 ಸ್ವಾತಂತ್ರ್ಯದ ಹಕ್ಕು - ವಾಕ್ ಮತ್ತು ಅಭಿವ್ಯಕ್ತಿ ಸ್ವತಂತ್ರ ಕೊಡುತ್ತದೆ
3 ಶೋಷಣೆಯ ವಿರುದ್ಧದ ಹಕ್ಕು - ಮಾನವ ಜೀವಿಗಳ ಮಾರಾಟ, ಅನೈತಿಕ ಕಾರ್ಯಗಳಿಗೆ ತಳ್ಳುವುದರ ನಿಷೇಧ.
4 ಧಾರ್ಮಿಕ ಸ್ವತಂತ್ರದ ಹಕ್ಕು - ಯಾವುದೇ ಧರ್ಮವನ್ನು ಸ್ವೀಕರಿಸುವ ಹಕ್ಕು
5 ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು - ಅಲ್ಪ ಸಂಖ್ಯಾತರ ಭಾಷೆ, ಮತ್ತು ಸಂಸ್ಕೃತಿಯ ರಕ್ಷಣೆ.
6 ಸಂವಿಧಾನಾತ್ಮಕ ಪರಿಹಾರಗಳ ಹಕ್ಕು - ಈ ಹಕ್ಕು ಮೇಲಿನ ಎಲ್ಲಾ ಹಕ್ಕುಗಳ ಅನುಷ್ಠಾನಕ್ಕಾಗಿ ಸಂವಿಧಾನಿಕ ಪರಿಹಾರವನ್ನು ಪಡೆಯುವ ಅವಕಾಶವನ್ನು ಕಲ್ಪಿಸುತ್ತದೆ
Directive Principles of state policy.
1 ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ
2 ಕೃಷಿ ಮತ್ತು ಪಶು ಪಾಲನೆಗೆ ಆದ್ಯತೆ
3 ಸ್ಮಾರಕಗಳ ಸ್ಥಳಗಳ ಮತ್ತು ರಾಷ್ಟ್ರೀಯ ಮಹತ್ವದ ವಸ್ತುಗಳ ರಕ್ಷಣೆ.
4 ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸುವುದು.
5 ಎಲ್ಲಾ ಪ್ರಜೆಗಳಿಗೂ ಸಮಾನ ನಾಗರೀಕ ಸಂಹಿತೆ.
6 ಮಹಿಳೆ ಮತ್ತು ಪುರುಷರಿಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ
🔮ಸಂವಿಧಾನ ತಿದ್ದುಪಡಿ ಪಡಿ 42 ನೆಯ ಕಾಯ್ದೆ, 1976 ರ ನಂತರ ಸಂವಿಧಾನದ 4 a ಭಾಗದಲ್ಲಿ ಪ್ರಜೆಗಳ ಹತ್ತು ಮೂಲಭೂತ ಕರ್ತವ್ಯಗಳನ್ನು ಸೇರಿಸ ಲಾಗಿದೆ.
ಅವೆಂದರೆ
ಸಂವಿಧಾನಕ್ಕೆ ನಿಷ್ಠೆ ತೋರಿಸುವುದು. ಮತ್ತು ಅದರ ಆದರ್ಶಗಳನ್ನು ಹಾಗೂ ಸಂಸ್ಥೆಗಳನ್ನು ,ರಾಷ್ಟ್ರೀಯ ಧ್ವಜವನ್ನು ಮತ್ತು ರಾಷ್ಟ್ರ ಗೀತೆಯನ್ನು ಗೌರವಿಸುವುದಾಗಿದೆ.
ಇನ್ನೂ ಹಲವಾರು ಕರ್ತವ್ಯಗಳನ್ನು ಸಂವಿಧಾನ ಭಾರತದ ಪ್ರಜೆಗಳಿಗೆ ನೀಡಿದೆ
ನಮ್ಮ ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಪಡೆಯುವಲ್ಲಿ ನಮಗೆ ಸರ್ವತಂತ್ರ ಹಕ್ಕಿದೆ ಮತ್ತು ಎಲ್ಲಾ ಹಕ್ಕುಗಳನ್ನು ಪಡೆಯೋಣ.
ಹಾಗೆಯೇ ಕೆಲವು ಕರ್ತವ್ಯಗಳನ್ನು ಕೊಟ್ಟಿದೆ ಅವುಗಳಿಗೆ ತಲೆ ಬಾಗಿಸೋಣ.
ಈಗ ಕೆಲವು ನ್ಯೂನ್ಯತೆಯ ಬಗ್ಗೆ ಮಾತನಾಡಬೇಕಿದೆ. ಸಂವಿಧಾನದ ನ್ಯೂನ್ಯತೆ ಎತ್ತಿ ಹಿಡಿಯುವಷ್ಟು ದೊಡ್ಡವನಲ್ಲ ನಾನು ಆದರೂ ಭಾರತದ ಅಮೂಲ್ಯ ಪ್ರಜೆಯಾದ ನನಗೆ ಹಕ್ಕಿದೆ
ಸಂವಿಧಾನದ ಭಾಗ 4 ನೆಯ ವಿಧಿಯಲ್ಲಿ ಭಾರತದ ಪ್ರಜೆಗಳು ಸಮಾನರು ಎಂದು ಇದೆ ಅದರ ಪ್ರಕಾರ ಮೀಸಲಾತಿಯ ಅವಶ್ಯಕತೆ ಇದೆಯೇ. ಅಸ್ಪೃಶ್ಯತೆ ಬೇಡ ಎಂಬ ನಿಯಮ ಮಾಡಿದಾಗ ....ಮೀಸಲಾತಿಯ ನಿಯಮ ಯಾಕೆ ಇದರಿಂದ ಎಲ್ಲಾ ಜನರಲ್ ಕ್ಯಾಟಗರಿ ಯಲ್ಲಿ ಬರುವ ವಿದ್ಯಾರ್ಥಿಗಿಗೆ ಮಲತಾಯಿ ಧೋರಣೆ ಮಾಡಿದಂತೆ ಆಗುತ್ತಿದೆ. ಮೀಸಲಾತಿಯ ಅಡಿಯಲ್ಲಿ ಮೀಸಲಾತಿ ಪಡೆದವರು ಕಡಿಮೆ ಅಂಕ ಗಳಿಸಿದರೂ ಆಯ್ಕೆ ಯಾಗುವರು. ಮತ್ತು ಜನರಲ್ ನವರು ತುಂಬಾ ಅಂಕ ಗಳಿಸಿದರೆ ಮಾತ್ರ ಅವಕಾಶ ....ಇದು ಮಲತಾಯಿ ಧೋರಣೆ ಯಾಗಿದೆ. ಪ್ರಜೆಗಳು ಎಂದ ಮೇಲೆ ಎಲ್ಲರು ಒಂದೇ ....ಬೇಕಿದ್ದರೆ ಯಾರನ್ನೂ ಕೀಳು ಮಾಡಬಾರದು ಮಾಡಿದರೆ ಶಿಕ್ಷೆ ಎಂದು ನಿಯಮ.ತರಲಿ. ಎಲ್ಲರು ಸಮಾನರು ಎಂದು ಮಾಡಲಿ. ಮೀಸಲಾತಿ ತೆಗೆದು ಓದುವ ಪ್ರತಿಭೆಗಳನ್ನು ಬೆಳೆಸ ಬೇಕಿದೆ .
ಇನ್ನು ರೈತರು ಭಾರತದ ಬೆನ್ನೆಲುಬು .
ಭಾರತದ ಪ್ರತಿ ರೈತರ ಕಾಳಜಿಗೆ ಹಲವಾರು ನಿಯಮ ರೂಪಿಸ ಬೇಕು
ಕಷ್ಟ ಪಟ್ಟು ಬೆಳೆದ ರೈತರ ಆಹಾರ ಧಾನ್ಯಗಳಿಗೆ ಬೆಂಬಲ ಬೆಲೆ ಸೂಚಿಸಿ ಮದ್ಯವರ್ತಿಗಳ ಬಲೆಯಿಂದ ಬಿಡಿಸ ಬೇಕು ...ರೈತರ ಆತ್ಮಹತ್ಯೆ ಯ ಕಡೆ ಗಮನ ಹರಿಸ ಬೇಕು.
ಇದರ ಬಗ್ಗೆ ಉಪಯೋಗ ವಾಗುವ ನಿಯಮ ಜಾರಿ ತರಬೇಕು ರೈತರ ಬೆಳೆ ನೇರ ಗ್ರಾಹಕರಿಗೆ ತಲುಪಬೇಕು.
ಇನ್ನು ಮಹಿಳೆಯರ ಅಭಿವೃದ್ಧಿಗೆ ಹಲವಾರು ನಿಯಮ ಕಾನೂನುಗಳನ್ನು ಸಂವಿಧಾನ ಮಾಡಿದ್ದರೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ.
ಬದಲಾಗಿ ಹೆಣ್ಣಿನ ಮೇಲೆ ಅತ್ಯಾಚಾರ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಯಾವ ನಿಯಮ ಮಾಡಿದರು ಅತ್ಯಾಚಾರ ಪ್ರಕರಣದ ಹೆಚ್ಚುತ್ತಿದೆ.
ಸಂವಿಧಾನ ಮತ್ತಷ್ಟು ಅತ್ಯಾಚಾರ ವಿರೋಧೀ ಕಾಯ್ದೆ ತಂದು ಆರೋಪಿಗೆ ಕ್ರೂರ ಶಿಕ್ಷೆ ವಿಧಿಸಿದರೆ ಮಾತ್ರ ಅತ್ಯಾಚಾರ ಕಡಿಮೆ ಯಾಗುವುದು.
ಬಾಲಾಪರಾಧ ನಿಷೇಧ ಕಾಯ್ದೆ ಜಾರಿಗೆ ಬಂದು ದಶಕಗಳೇ ಬಂದರೂ ಬಡವರ ಮನೆಯ ಮಕ್ಕಳು ಕಾರಕೂನರಾಗಿ , ಬೀದಿ ಬೀದಿ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ....ಅಂತಹ ಮಕ್ಕಳನ್ನು ಗುರುತಿಸಿ ಸೂಕ್ತ ಭದ್ರತೆ ಕೊಡಬೇಕಿದೆ. ಬಾಲ ಕಾರ್ಮಿಕ ರಕ್ಷಣಾ ಕಾನೂನು ಮತ್ತಷ್ಟು ಬಲ ಪಡಿಸಬೇಕಿದೆ .
ಇತ್ತೀಚೆಗೆ ಪ್ರತಿಭಟನೆ ಹೆಚ್ಚಾಗಿದೆ ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಅಪಾರ ಹಾನಿ ಯಾಗಿದೆ ಇದರ ಬಗ್ಗೆ ನಿಯಮ ರೂಪಿಸ ಬೇಕಿದೆ.
ಇತ್ತೀಚೆಗೆ ಬೇರೆ ದೇಶದ ವಲಸೇ ಗಾರರ ಹಾವಳಿ ಹೆಚ್ಚಾಗಿದೆ. ರೋಹಿಂಗ್ಯಾ ಗಳು ಹೆಚ್ಚೆಚ್ಚು ವಲಸೆ ಬಂದು ಭಾರತಕ್ಕೆ ಸೇರಿಕೊಳ್ಳುತ್ತಿರುವರು. ಅವರು ಬರದಂತೆ ತಡಯುವ ವಿಧಿ ರೂಪಿಸಿ ಅದರ ಅಡಿ ನಿಯಮ ತಂದು ವಲಸಿಗರನ್ನು ಓಡಿಸುವ ಕಾನೂನು ಜಾರಿ ತರಬೇಕಿದೆ.
ರಾಜಕೀಯ ನಾಯಕರ ಹತೋಟಿಯಿಂದ ಕಾನೂನು ದೂರ ಇರುವಂತೆ ಮಾಡಿ ನ್ಯಾಯ ರಕ್ಷಿಸಬೇಕಾಗಿದೆ ಯಾವುದೇ ಕಾರಣಕ್ಕು ಕಾನೂನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುವ ಬಾರದು ಎಂದು ವಿಧಿ ರೂಪಿಸ ಬೇಕಿದೆ.
ಪ್ರತಿನಿಧಿಗಳು ವಯಕ್ತಿಕ ವಿಚಾರಕ್ಕೆ ಸ್ಥಾನದ ಪವರ್ ಬಳಸದೆ ಇರುವಂತೆ ಕಾನೂನು ತರಬೇಕು.
ಪ್ರತಿ ಪ್ರಜೆಗೂ ನ್ಯಾಯದ ಸಮಾನತೆಯ ಹಕ್ಕು ಕೊಟ್ಟಿದೆ ಆದರೆ ಪಟ್ಟಭದ್ರ ಹಿತಾಸಕ್ತಿ ನ್ಯಾಯ ಪಡೆಯಲು ಬಿಡುತ್ತಿಲ್ಲ.
ಇದರ ಸಮಗ್ರ ಚಿಂತನೆ ಸಂವಿಧಾನ ನಡೆಸಬೇಕಿದೆ.
ಮಕ್ಕಳಿಗೆ ಆರೋಗ್ಯ ಚಿಕಿತ್ಸೆ ಪಡೆಯುವ ಹಕ್ಕು ಇದ್ದರೂ ಮಕ್ಕಳ ಚುಚ್ಚುಮದ್ದುಗಳಿಗೆ ಹಣ ಪಡೆಯುವ ವ್ಯವಸ್ಥೆಯ ಮೇಲೆ ಅಗತ್ಯ ಕಾನೂನು ರೂಪಿಸ ಬೇಕಿದೆ.
ಹೀಗೆ ಹಲವಾರು ವಿಷಯಗಳು ಮಂಡನೆ ಯಾಗಿದ್ದರೂ ಕಾರ್ಯ ರೂಪಕ್ಕೆ ಬಂದರೂ ಪ್ರಜೆಗಳು ಲಾಭ ಪಡೆಯುತ್ತಿಲ್ಲ.
ಮೂಡನಂಬಿಕೆ ಮೌಡ್ಯತೆ ಬಲವಾಗಿದೆ. ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಸಂವಿಧಾನ ಎಡವುತ್ತಿದೆ.
ಸಂವಿಧಾನ ಒಬ್ಬ ವ್ಯಕ್ತಿ ಒಮ್ಮೆ ಮಾತ್ರ ಅಧಿಕಾರ ವಹಿಸಿ ಕೊಳ್ಳಬೇಕು ಎಂಬ ಕಾನೂನಿನ ಅನುಗುಣವಾಗಿ ವಿಧಿ ರೂಪಿಸಿ ಅಗತ್ಯ ಇರುವ ಎಲ್ಲಾ ವ್ಯಕ್ತಿಗಳೂ ಅಧಿಕಾರದ ಲಾಭಿ ಪಡೆಯಬೇಕು
ಹೀಗೆ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಪ್ರಜಾಪ್ರಭುತ್ವದ ಕಲ್ಪನೆಯು ಇಂದು ವಿಶ್ವದ ಅನೇಕ ದೇಶಗಳಲ್ಲಿ ಬೇರು ಬಿಟ್ಟಿದೆ.
ನಮ್ಮ ಬಾರತದಲ್ಲೂ ಕಳೆದ ಅರ್ಧ ಶತಮಾನಗಳಿಂದ ನಾವು ಈ ವ್ಯವಸ್ಥೆಯನ್ನು ಅಳವಡಿಸಿ ಕೊಂಡು ಬಂದಿದ್ದೇವೆ.
ಇಂದಿನ ಜಗತ್ತಿನಲ್ಲಿ ಜಾರಿಯಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಗಳು ಮೇಲು ನೋಟಕ್ಕೆ ಒಂದೇ ಎಂದು ಕಂಡರೂ ಆಚರಣೆಗಳು ಬೇರೆ ಬೇರೆ ಯಾಗಿವೆ.
ನಾವು ಭಾರತದಲ್ಲಿ ಇಂಗ್ಲೆಂಡ್ ದೇಶದ. ಸಂಸದೀಯ ಪ್ರಜಾಪ್ರಭುತ್ವ ವನ್ನು ಅನುಕರಣೆ ಮಾಡಿದ್ದೇವೆ . ಆದರೆ ಆ ದೇಶದಲ್ಲಿ ಇರುವ ಅರಸೊತ್ತಿಗೆ ನಮ್ಮಲ್ಲಿಲ್ಲ. ಹಾಗೂ ನಮ್ಮದು ಲಿಖಿತ ಸಂವಿಧಾನವಾಗಿದೆ.
ಹೀಗೆ ನಮ್ಮ ಸಂವಿಧಾನ ಹಲವಾರು ಮಜಲುಗಳನ್ನು ಹೊಂದಿದೆ. ಪ್ರಜೆಗಳಾದ ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿ ಕೊಂಡಾಗ ಮಾತ್ರ ಪ್ರಜಾ ಪ್ರಭುತ್ವ ಫಲಪ್ರದವಾಗ ಬಲ್ಲದು.
ಭಾರತ್ ಮಾತಾಕಿ ಜೈ
ವಂದೇ ಮಾತರಂ