top of page

, ತಾನು ಒಬ್ಬ ಹೆಣ್ಣು ಮಕ್ಕಳ ತಂದೆಯಾಗಿರುವ ಯಡಿಯೂರಪ್ಪರಿಂದ ಈ ರೀತಿಯ ಘಟನೆ ಜರುಗಲು ಸಾಧ್ಯವಿಲ್ಲ ಎಂಬ ಬಲವಾದ ನಂಬಿಕೆ ನಮ್ಮದು

Mar 17, 2024

1 min read

4

142


ಅವ್ವ ಎನ್ನದೇ ಯಾರನ್ನೂ ಮಾತನಾಡಿಸದ ಮಗ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ ತಂದ ಯಜಮಾನ, ಲಕ್ಷಾಂತರ ಮಕ್ಕಳಿಗೆ ಸೈಕಲ್ ಕೊಟ್ಟು ಶಾಲೆಗೆ ಕಳುಹಿಸಿದ ಗುರು, ಕರುನಾಡಿನ ಧೀರ್ಘಾವದಿಯ ಮುಖ್ಯಮಂತ್ರಿಯಾಗಿ ಸೇವೆ ನೀಡಿದವ, ಸರ್ವಸ್ವವನ್ನು ತ್ಯಜಿಸಿ ಜನರಿಗಾಗಿ ಜೀವನ ಅರ್ಪಿಸಿದವನನ್ನು ಈ ರೀತಿ ನಡೆಸಿಕೊಳ್ಳುವುದೇ ನಮ್ಮ ಸಮಾಜ ?

ಅಂದು ಸ್ವಚ್ಛ ಮನಸ್ಸಿನಿಂದಲೇ ಈ ಕನ್ನಡ ನಾಡಿನ ಕಲ್ಯಾಣಕ್ಕಾಗಿ, ರೈತರ ಉದ್ದಾರಕ್ಕಾಗಿ, ನಾಡಿನ ಮಕ್ಕಳ ಭವಿಷ್ಯಕ್ಕಾಗಿ ಮುಖ್ಯಮಂತ್ರಿಯಾಗಿ ದುಡಿದು ಜನಸೇವೆ ಮಾಡುತ್ತಿರುವಾಗ ಅಕೌಂಟಿಗೆ ಹಣ ಹಾಕಿ, ಭ್ರಾಷ್ಟಾಚಾರದ ಆರೋಪ ಹೊರಿಸಿ, ಒಬ್ಬ ಜನ ಸೇವಕನನ್ನು ಜೈಲಿಗಟ್ಟಿದರು, ಆ ಜೈಲಿನ ಗೋಡೆಗಳ ಹಿಂದೆಯೂ ಆತ ಈ

ನಾಡಿಗಾಗಿ ಮರುಗುವುದನ್ನು ಬಿಡಲಿಲ್ಲ. ಇಂದು ಇಳಿ ವಯಸ್ಸಿನಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು, ಸಂಘಟನೆಯ ಕಾರ್ಯ ಮಾಡುತ್ತಾ ಸಾಗುತ್ತಿರುವ ನಮ್ಮ 82 ಪ್ರಾಯದ ಯಡಿಯೂರಪ್ಪರ ಮೇಲೆ ಪೋಸ್ಕೋ ಕೇಸ್ ದಾಖಲಿಸುವುದು ಎಂದಾದರೆ ? ಛೀ, ಧಿಕ್ಕಾರವಿದೆ ಈ ಮಾನಸಿಕತೆಯವರ ಮೇಲೆ.

ಸಣ್ಣ ಪುಟ್ಟ ಸಾಧನೆ ಮಾಡುವವನೂ ತನ್ನ ಇಡೀ ಜೀವನವನ್ನೇ ವ್ಯಯಿಸಿ ತಾನಂದುಕೊಂಡದ್ದನ್ನು ಸಾಧಿಸಲು ಹೆಣಗುತ್ತಾನೆ. ಅಂತದ್ದರಲ್ಲಿ ಜನರಿಗಾಗಿ, ನಾಡಿಗಾಗಿ, ವಿಚಾರ ವ್ಯವಸ್ಥೆಗಾಗಿ ತನ್ನನ್ನು ತಾನು ಸವೆಸಿ, ಬೆನ್ನು ಬಾಗಿ ನಡೆದಾಡುವ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವೇ ?

ತಮ್ಮ ತಮ್ಮ ದುರಾಸೆಗಳಿಗಾಗಿ ಹತ್ತಾರು ಜನರ ಮೇಲೆ ಕೇಸ್ ಹಾಕಿ ತಿರುಗುವ ಹೆಮ್ಮಾರಿಯರು, ಒಬ್ಬ ಜನಸೇವಕ ದಶಕಗಳ ಕಾಲ ಜನರಿಗಾಗಿ ದುಡಿದು ಸಾಧಿಸಿದ ಹೆಸರು ಕೀರ್ತಿಯನ್ನು ಇಂತಹ ಒಂದು ಸಣ್ಣ ತುಚ್ಯ ಆರೋಪದಿಂದ ಹಾಳುಗೆಡುವುದಾದರೆ ? ಇದು ಸಹಿಸಲಾಗದು. ಕಾಣದ ಕೈಗಳು ಒಬ್ಬ ಮಹಾನಾಯಕನ ತೇಜೋವಧೆ ಮಾಡುವುದನ್ನು ಕಂಡು ಕಾಣದಂತೆ ಕೂತರೆ ಭಗವಂತ ನಮ್ಮ ಬದುಕನ್ನೂ ಮೆಚ್ಚುವುದಿಲ್ಲ. ಈ ಷಡ್ಯಂತ್ರವನ್ನು ನಾನು ಖಂಡಿಸುತ್ತೇನೆ. ಸಕಲರೊಂದಿಗೆ ಗೌರವದಿಂದ ನಡೆದುಕೊಳ್ಳುವ, ತಾನು ಒಬ್ಬ ಹೆಣ್ಣು ಮಕ್ಕಳ ತಂದೆಯಾಗಿರುವ ಯಡಿಯೂರಪ್ಪರಿಂದ ಈ ರೀತಿಯ ಘಟನೆ ಜರುಗಲು ಸಾಧ್ಯವಿಲ್ಲ ಎಂಬ ಬಲವಾದ ನಂಬಿಕೆ ನಮ್ಮದು. ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಅವರ ಚರಿತ್ರೆ ಹರಣ ಮಾಡಲು ಯಾರೇ ಪ್ರಯತ್ನಿಸಿದರೂ ಅದೊಂದು ಅಕ್ಷಮ್ಯ ಅಪರಾಧ. ಯಡಿಯೂರಪ್ಪರ ಜೊತೆ ನಾನಿದ್ದೇನೆ ... ನೀವು ?


ಬನ್ನಿ ಈ ಘಟನೆಯನ್ನು ಖಂಡಿಸೋಣ, ನಮ್ಮ ನಾಯಕರಿಗಾಗಿ ಹೊರಾಡೋಣ.


ಭಾರತ ಮಾತಾ ಕೀ ಜೈ


Mar 17, 2024

1 min read

4

142

bottom of page