ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು
#ಓಣಂ_ಸೊಗಸು
ಸನಾತನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಹಬ್ಬ ಕೇರಳೀಯರ ಓಣಂ. ಅದಕ್ಕೂ ಕಾರಣವಿದೆ ಉಳಿದೆಲ್ಲ ಹಬ್ಬಗಳು ಧರ್ಮಕ್ಕೆ ಅನುಸಾರವಾಗಿ ಆಚರಿಸಿದರೆ, ಇದನ್ನು ಹಿಂದು-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಸೇರಿ ಸಾಮರಸ್ಯದಿಂದ ಆಚರಿಸುತ್ತಾರೆ.
ಮಹಾದಾನಿಯಾಗಿರುವ ಮಹಾಬಲಿ ವರ್ಷಕ್ಕೊಮ್ಮೆ ಸಿಂಹ ಮಾಸದ ಶ್ರವಣ ನಕ್ಷತ್ರದಂದು (ತಿರುವೋಣಂ) ಭೂಲೋಕಕ್ಕೆ ಬರುತ್ತಾನೆಂಬುದು ಕೇರಳೀಯರ ಅಚಲ ನಂಬಿಕೆ. ಹಸ್ತಾ ನಕ್ಷತ್ರದಿಂದ (ಅತ್ತಾ ಪತ್ತೋಣಂ) ಮೊದಲ್ಗೊಂಡು ಶ್ರವಣ ನಕ್ಷತ್ರದ ತನಕ 10 ದಿನಗಳ ಕಾಲ ಮಲೆಯಾಳಿಗರು ಓಣಂ ಹಬ್ಬವನ್ನು ಆಚರಿಸುತ್ತಾರೆ. ಪ್ರತಿ ಮನೆಯ ಅಂಗಳದಲ್ಲೂ ಹೆಂಗಳೆಯರು ನಾನಾ ಬಗೆಯ ಹೂಗಳಿಂದ ಪೂಕ್ಕಳಂ(ಹೂವಿನ ರಂಗೋಲಿ) ಬಿಡಿಸಿ ಬಲಿ ಚಕ್ರವರ್ತಿ (ಮಾವೇಲಿ)ಯನ್ನು ಸ್ವಾಗತಿಸುತ್ತಾರೆ.
ಓಣಂ ಹಬ್ಬದಾಚರಣೆಯಲ್ಲಿ ಕೊನೆಯ ಮೂರು ದಿನಗಳನ್ನು ಒನ್ನಾ ಓಣಂ(ಒಂದನೇ ಓಣಂ), ತಿರುಓಣಂ(ಪ್ರಧಾನ ಅಥವಾ ನಡು ಓಣಂ), ಮೂನ್ನಾಂ ಓಣಂ(ಕೊನೆಯ ಓಣಂ) ಎಂದು ಆಚರಿಸಲಾಗುತ್ತಿದೆ. ಕೇರಳದಲ್ಲಿ ಪೂಕ್ಕಳಂ ಒಂದು ವಿಶಿಷ್ಟ ಸಂಪ್ರದಾಯ ಕಲೆಯಾಗಿದ್ದು, ಅದಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಓಣಂ ಭೋಜನ(ಓಣಂ ಸದ್ಯ)ಕ್ಕೆ ವಿಶೇಷವಾದ ಮಹತ್ವವಿದೆ. ಅಂದಿನ ಊಟದೊಂದಿಗೆ ಅನೇಕ ಬಗೆಯ ಭಕ್ಷ್ಯ-ಪದಾರ್ಥಗಳನ್ನು ತಯಾರಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ನೆಲದಲ್ಲಿ ಕುಳಿತು ಸಂತಸದಿಂದ ಸವಿಯುವುದು ವಾಡಿಕೆ. ಓಣಂ ಹಬ್ಬದಂದು ಶುಭ್ರವಾದ ಹೊಸ ಉಡುಪು, ಆಭರಣಗಳನ್ನು ಧರಿಸಿ, ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ಸನಾತನ ಸಂಸ್ಕೃತಿಯ ದ್ಯೋತಕವಾಗಿದೆ. ಮನೆಯ ಹಿರಿಯರು ಕಿರಿಯರಿಗೆ ಹಾಗೂ ಬಡ ಬಗ್ಗರಿಗೆ ಹಣ (ಕೈ ನೀಟಂ) ಕೊಡುವರು. ಅಲ್ಲದೆ ಮನರಂಜನೆಗಾಗಿ ಉಯ್ಯಾಲೆ, ಸಿಡಿ ಮದ್ದು ಪ್ರದರ್ಶನ, ದೋಣಿ ವಿಹಾರ, ಪೆಟ್ಟಾಟ (ಓಣ ತಲ್ಲ್), ತಿರುವಾದಿರ ನೃತ್ಯ, ಕಥಕ್ಕಳಿ, ಆನೆಯಂಬಾರಿ, ನೃತ್ಯ, ಸಂಗೀತ ಮೊದಲಾದವುಗಳನ್ನು ಆಯೋಜಿಸಲಾಗುತ್ತದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಹವನಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಕೇರಳದಲ್ಲಿ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.
ಇನ್ನೊಂದು ಅಂಶವೆಂದರೆ ಈ ಹತ್ತು ದಿನಗಳ ಕಾಲ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಭೂಮಿಯ ಮೇಲಿರುತ್ತಾರೆಂಬುದು ಜನರ ನಂಬಿಕೆ. ಅಲ್ಲದೆ ಈ ದಿನಗಳಲ್ಲಿ ದವಸ ಧಾನ್ಯಗಳನ್ನು ಕಟಾವುಗೈದು ಮನೆಗಳನ್ನು ತುಂಬಿಸಲಾಗುತ್ತದೆ.
ಕೊಲ್ಲಂ ಜಿಲ್ಲೆಯ ತ್ಯಕ್ಕಾಕರ ಎಂಬಲ್ಲಿನ ಪ್ರಸಿದ್ಧ ದೇವಾಯಲದಲ್ಲಿ ಮಹಾಬಲಿಯನ್ನು ಪಾತಾಳಕ್ಕೆ ತಳ್ಳಲಾಗಿದೆ ಎಂಬ ಐತಿಹ್ಯದೊಂದಿಗೆ ಇಲ್ಲಿ ವಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಪೂಜೆ ನೆರವೇರಿಸಲಾಗುತ್ತದೆ. ತಮಿಳುನಾಡು ಮತ್ತು ಕರ್ನಾಟಕದಲ್ಲೂ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಓಣಂ ಉತ್ಸವಾಚರಣೆಯನ್ನು ಜಾತಿ, ಮತ, ಬಡವ, ಬಲ್ಲಿದ ಎಂಬ ತಾರತಮ್ಯವನ್ನು ಮರೆತು ಎಲ್ಲರೂ ಒಂದಾಗಿ ಸಂತಸದಿಂದ ಆಚರಿಸುತ್ತಾರೆ.
ಕೇರಳದಲ್ಲಿ ಓಣಂ ಹಬ್ಬದ ಮೂಲಕ ಬಲಿ ಚಕ್ರವರ್ತಿಯನ್ನು ಭಜಿಸಿದರೆ, ಕರ್ನಾಟಕದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಮಹಾಬಲಿಯನ್ನು ಪೂಜಿಸಲಾಗುತ್ತಿದೆ.
ಈ ಹಬ್ಬದ ಆಚರಣೆಯಲ್ಲಿರುವ ಸುಂದರತೆಯನ್ನು ಅಭಿಮಾನಿಸುತ್ತಾ, ಈ ಹಬ್ಬವನ್ನು ಸಂತಸ, ಸಾಂಸ್ಕೃತಿಕ ಶ್ರದ್ಧೆ ಮತ್ತು ಪಾರಂಪರಿಕ ಭಕ್ತಿಗಳಿಂದ ಆಚರಿಸುತ್ತಿರುವ ಸಕಲರಿಗೂ ಶುಭ ಹಾರೈಕೆಗಳನ್ನು ಸಲ್ಲಿಸೋಣ.
ಅಂತೆಕಂತೆ ಪುರಾಣವೆಂದು ಮೂದಲಿಸಬೇಡಿ, ಆ ಪುರಾಣಗಳೇ ಹಿಂದೂಸ್ಥಾನಿಗಳ ನೈಜ ಇತಿಹಾಸ. ಪ್ರತಿವರ್ಷವೂ ಬಲಿಪಾಡ್ಯಮಿ ದಿನ ಈ ನೈಜ ಇತಿಹಾಸವನ್ನು ತಿಳಿಸುತ್ತಲೇ ಇರುವೆ. ಓದಿದವರು ಇತರರಿಗೆ ಹಂಚಿ. ಓದದೇ ಇರುವವರು ಸಂಪೂರ್ಣ ಓದಿ.
ಮಹಾವಿಷ್ಣು ವಾಮನನಾಗಿ ಬಲಿ ಚಕ್ರವರ್ತಿಯ ತಲೆಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಜೊತೆಗೆ ಪಾತಾಳ ಅಂದರೆ ಅದು ಬೇರೆ ಯಾವೊದೊ ಒಂದು ಲೋಕ ! ಎಂದು ತಿಳಿದಿದ್ದರೆ ಅದು ಮಹಾ ತಪ್ಪು.
ಭಾರತೀಯ ಮಹತ್ವದ ಇತಿಹಾಸ ವಿಷಯ ತಿಳಿದು ಹೆಮ್ಮೆಯಿಂದ ಎದೆತಟ್ಟಿ ಹೇಳಿ ನಾವು ಹಿಂದೂಸ್ಥಾನಿಗಳು ಎಂದು. ಸರಿಯನಿಸಿದರೆ ಮತ್ತಷ್ಟು ಜನಕ್ಕೆ ಮಾಹಿತಿ ಹಂಚಿ.
ಪಾತಾಳ ಅಂದರೆ ಈಗಿನ ದಕ್ಷಿಣ ಅಮೆರಿಕದ ಪೆರು ದೇಶ(ಸುತಲ)!!!
ನಾ ವಾಮನಮೂರ್ತಿ ಮತ್ತು ಬಲಿಚಕ್ರವರ್ತಿಯ ಹಿಂದಿನ ಪೂರ್ಣ ಕಥೆಯೇಳಲ್ಲ ಸಂಕ್ಷಿಪ್ತವಾಗಿ ಭಾರತೀಯರು ಹೆಮ್ಮೆ ಪಡುವಂತ ಇತಿಹಾಸ ಹೇಳುವೆ.
ಬಲಿ_ಚಕ್ರವರ್ತಿಯು ಏಶಿಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳು ಈತನ ಆಳ್ವಿಕೆಯಲ್ಲಿತ್ತು ಬಲಿ ಉತ್ತಮ ರಾಜನಾಗಿದ್ದರು ದೇವತೆಗಳು ವಿರೋಧಿಯಾಗಿ ಬೆಳೆಯತ್ತಿದ್ದ. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳ ಮೊರೆಗೆ ಮಹಾವಿಷ್ಣು ವಾಮನವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾ, ಯುರೋಪ್,ಮತ್ತು ಆಫ್ರಿಕಾ ಖಂಡಗಳು ಅಳೆದ. (ಈಗಲೂ ಭಾರತದಲ್ಲಿ ಹೆಜ್ಜೆಗಳನ್ನು ಅಳತೆಯಾಗಿ ಬಳಸುವ ರೂಡಿಯಲ್ಲಿದೆ.) ಈಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿ ಗೆ ಇರಲು ಹಕ್ಕಿಲ್ಲದೆ ಇರುವುದರಿಂದ, ಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ !
ಸಮುದ್ರ ಮಾರ್ಗವಾಗಿ ಬಲಿ ಚಕ್ರವರ್ತಿಯನ್ನು ಕಳಿಸುವಾಗ ಹಾಗೆ ಬರಿಗೈಯಲ್ಲಿ ಕಳಿಸಲಿಲ್ಲ ಅಷ್ಟ ಐಶ್ವರ್ಯಗಳೊಂದಿಗೆ ಮತ್ತೆ ಅಲ್ಲಿ ನೆಲೆಸಲು ಅನುಕೂಲವಾಗಲು ರಾಕ್ಷಸರ ಆರ್ಕಿಟೆಕ್ಚರ್ ಮಯ ನೊಂದಿಗೆ ಅಸುರರು, ದೈತ್ಯರು,ದಾನವರು, ಕಳುಹಿಸಿ ನಾಗ ಜನಾಂಗ ಮತ್ತು ಸರ್ಪಕುಲದವರ ಅಳಿಯ ಆಸ್ತಿಕ ಮಹರ್ಷಿಗಳ ಜನಾಂಗವನ್ನು ಈಗಿನ ರಾ ಏಜೆಂಟ್ ಗಳಂತೆ ಬಲಿಯ ಚಲನವಲನಗಳ ಮಾಹಿತಿ ಪಡೆಯಲು ನೇಮಿಸಿ ಮಹಾವಿಷ್ಣು ಕಳುಹಿಸಿದರು.
ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು(ಸುತಲ)ಕ್ಕೆ ಸಮುದ್ರಮಾರ್ಗದಲ್ಲಿ ಕಳುಹಿಸಿದ. ಇದು ಬೇರೆ ದಾರಿಗಳಿಗಿಂತ ದಕ್ಷಿಣ ಅಮೆರಿಕಾಕ್ಕೆ ಹತ್ತಿರದ ದಾರಿ! ಒಮ್ಮೆ ನನ್ನ ಚಿತ್ರಗಳನ್ನು ನೋಡಿ ಅಥವಾ ಅಟ್ಲಾಸ್ ನೋಡಿ.
ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು (ಅಂದರೆ ಸಮುದ್ರದಲ್ಲಿ ಪ್ರಯಾಣಿಸಬೇಕು) ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ ತೋರಿಸುತ್ತೇವೆ ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆ ತಲುಪುತ್ತದೆ. ಯಾರಾದರೂ ಟ್ರೈ ಮಾಡುವವರು ಮಾಡಿ ಹೇಳಿ. ಸುಳ್ಳಲ್ಲ ಸ್ವಾಮಿ.
ಬಲಿ ಚಕ್ರವರ್ತಿಯ ದಾನಕ್ಕೆ ಮೆಚ್ಚಿ ಮಹಾವಿಷ್ಣುನಲ್ಲಿ ಕೊರಿಕೆಯ ಮೇರೆಗೆ ಬಲೇಂದ್ರನಿಗೆ ಭಾರತವರ್ಷಕ್ಕೆ ವರ್ಷಕೊಮ್ಮೆ ಬೇಟಿ ಕೊಡಲು ಅನುಮತಿಸಿದ. ಇಂದಿಗೂ ಕೇರಳದಲ್ಲಿ ವೈಭವದ ಓಣಂ ಹಬ್ಬವನ್ನು ಹತ್ತುದಿನಗಳ ಕಾಲ ಆಚರಿಸುತ್ತಾರೆ. ಈ ಸಮಯದಲ್ಲಿ ಬಲೀಂದ್ರ ನೌಕೆಯಲ್ಲಿ ಸಮುದ್ರ ಯಾನ ಮಾಇದ ನೆನಪಿಗಾಗಿ ಬೊಟ್ ಸ್ಪರ್ಧೆಗಳನ್ನು ಕಾಣಬಹುದು. ಹಾಗೂ ಹತ್ತುದಿನಗಳು ಬಲಿಯು ಪಾತಾಳದಿಂದ ಅಂದರೆ ದಕ್ಷಿಣ ಅಮೆರಿಕದಿಂದ ಭರತವರ್ಷಕ್ಕೆ ಬಂದು ಇರುವ ಸಂಕೇತವಾಗಿ ಕೇರಳದ ಕೊಚ್ಚಿ ಬಳಿಯಿರುವ ಕಾಕ್ಕನಾಡು ಪ್ರದೇಶದಲ್ಲಿ ಬಲಿಗಾಗಿ ನಿರ್ಮಿಸಿದ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರವೇ ಓಣಂ ಉತ್ಸವ ಪ್ರಾರಂಭವಾಗುತ್ತದೆ.
ಇಲ್ಲಿ_ಗಮನಿಸುವ_ಅಂಶವೇನೆಂದರೆ
೧.ಬಲಿಯ ಆಪ್ತ ಮಯ ಶ್ರೇಷ್ಠ ವಾಸ್ತುಶಿಲ್ಪಿ . ಮಾಯನ್ಸ್ ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳು ಹಲವನ್ನು ಈಗಲು ನೋಡಬಹುದು.
೨. ಸರ್ಪಕುಲದ ಅಳಿಯ ಆಸ್ತಿಕ ಮಹರ್ಷಿಯಿಂದ ಆಜ್ಟೆಕ್ ಜನಾಂಗ ಪ್ರಾರಂಬವಾಯಿತು.
೩. ನಾಗ ಜನಾಂಗೀಯರ ಇಂಕ ಸಾಮ್ರಾಜ್ಯ , ಇವರ ವಂಶವನ್ನು ಈಗಲೂ ಉತ್ತರ ಮತ್ತು ದಕ್ಷಿಣ ಅಮೆರಿಕದ ಹಲವು ಕಡೆ ಕಾಣುತ್ತಾರೆ.
೪. ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಮೂಲ ಜನಾಂಗ ಭಾರತೀಯ ಚಹರೆ,ಬಣ್ಣವನ್ನೆ ಹೋಲುವುದನ್ನು ಕಾಣಬಹುದು
೫. ಮಾಯಾನ್, ಆಜ್ಟೆಕ್, ಇಂಕಾ ಸಾಂಪ್ರದಾಯಿಕ ಹಲವು ಹೋಲಿಕೆ ಕಾಣಬಹುದು ಭಾರತೀಯರಂತೆ ಪೃಕೃತಿಯನ್ನು ಪೂಜಿಸುವರು, ಪುರೋಹಿತಶಾಹಿ, ಪಂಚಾಂಗ ಮುಂತಾದ ಹಲವು ಆಚರಣೆ ನಮ್ಮನ್ನೆ ಹೋಲುತ್ತದೆ.
ಪ್ರಪಂಚದಾದ್ಯಂತ ಭಾರತದಿಂದ ವಲಸೆ ಹೋಗಿ ಅನೇಕ ನಾಗರಿಕತೆಗಳ ಹುಟ್ಟು ಹಾಕಿದ ಇತಿಹಾಸವನ್ನು ನಾವು ಓದದಂತೆ ತಿರುಚಿ ಅರೆಬರೆ ಸಂಸ್ಕೃತ ಕಲಿತ ಮಾಕ್ಸಮಲ್ಲರ್ ನನ್ನು ಮಹಾನ್ ಪಂಡಿತನೆಂದು ತಿಳಿದು ಆಂಗ್ಲರಿಗೆ ಅನುಕೂಲವಾಗಿ ಇತಿಹಾಸ ಬರೆದಿದ್ದನ್ನೆ ಮಹಾನ್ ಇತಿಹಾಸ ಎಂದು ತಿಳಿದ ಮೂರ್ಖರು ನಾವು. ಇತ್ತಿಚೀಗೆ ಅನೇಕ ಸಂಶೋಧನೆಗಳಿಂದ ನೈಜ ಇತಿಹಾಸದ ಪುಸ್ತಕಗಳು ಬಂದಿದೆ .
ಭೂಮಿಯ ೧೮೫೧-೨೧೫೯ ಮಿಲಿಯನ್ ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಘಟನೆಗಳನ್ನು ಕಾಲಕ್ರಮೇಣ ಪುರಾಣದ ರೂಪದಲ್ಲಿ ಸ್ವಲ್ಪ ಮಟ್ಟಿಗೆ ಅತಿಶಯವಾಗಿ ಕಥೆಗಳ ರೂಪದಲ್ಲಿ ಬದಲಾಗಿ ಕೇಳುತ್ತೇವೆ. ಆದರೆ ಅದರ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನೆಗಳಿಂದ ಅನ್ವೇಷಿಸಿದಾಗ ಅನೇಕ ಪುರಾಣದ ಕಥೆಗಳು ಇತಿಹಾಸವಾಗಿ ಕಂಡುಬರುತ್ತದೆ ಅದನ್ನು ಅರ್ಥೈಸಿಕೊಳ್ಳವ ಮನೋಭಾವ ಇರಬೇಕು .
ಮತ್ತೊಂದು ವಿಷಯ ಬಲಿ ಚಕ್ರವರ್ತಿ ಗೇ ಮಹಾವಿಷ್ಣು ಅನ್ಯಾಯ ಮಾಡಿದ ಎಂದು ಬೊಬ್ಬೆ ಹೊಡೆದುಕೊಳ್ಳವ ಜನರೇ ಬಲಿ ಚಕ್ರವರ್ತಿ ಬಲಶಾಲಿಯಾದಂತೆ ಬಲಿಯಲ್ಲೂ ಅನೇಕ ದುರ್ಗಣಗಳು ಹೆಚ್ಚಾಗಿ ಪಾಪ ಕಾರ್ಯಗಳಿಗೆ ಕೈ ಹಾಕಿದಾಗ ಬಲಿಯನ್ನು ಮಟ್ಟಹಾಕಲು ದೇವತೆಗಳ ಕೈಯಲ್ಲೂ ಸಾಧ್ಯವಾಗದಾಗ ಮಹಾವಿಷ್ಣು ವಾಮನ ಅವತಾರ ಎತ್ತಬೇಕಾಯಿತು.
ಬಲಿ ಚಕ್ರವರ್ತಿ ದಾನಕ್ಕೆ ಮೆಚ್ಚಿ ಮಹಾವಿಷ್ಣು ಬಲಿಚಕ್ರವರ್ತಿಯ ಬಲಿ ತೆಗೆದುಕೊಳ್ಳದೆ. ಈ ಭೂ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಿದ ಹಾಗೂ ಬಲಿ ಚಕ್ರವರ್ತಿ ಮೇಲಿನ ಪ್ರೀತಿಗಾಗಿ ಸ್ವತಃ ಬಲಿ ಚಕ್ರವರ್ತಿಯ ದ್ವಾರ ಪಾಲಕನಾಗಿ ಕಾಯುತ್ತಿದ್ದ ಹಾಗೂ ಮುಂದಿನ ಕಲ್ಪದಲ್ಲಿ ಬಲಿ ಚಕ್ರವರ್ತಿಗೆ ಇಂದ್ರಪದವಿಯ ವರ ನೀಡಿದ್ದು ಮತ್ತೆ ಚಿರಂಜೀವಿ ಯಾಗಿರು ಎಂದು ಇಂದಿಗೂ ಪ್ರಪಂಚದ ಏಳುಜನ ಚಿರಂಜೀವಿ ಗಳಲ್ಲಿ ಒಬ್ಬರಾಗಿರುವ ಬಲಿಂದ್ರನಿಗೆ ವರವಿತ್ತ ಮಹಾವಿಷ್ಣುವಾದ ವಾಮನಮೂರ್ತಿಯೇ ಎಂಬುದು ಮರೆಯಬಾರದು.
(ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ
ಕೃಪಃ ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನಃ)
ಮಹಾವಿಷ್ಣು ಬಲಿ ಚಕ್ರವರ್ತಿಯನ್ನು ಬರಿಗೈಯಲ್ಲಿ ದಕ್ಷಿಣ ಅಮೆರಿಕಕ್ಕೆ ಕಳಿಸದೆ ಜೊತೆಗೆ ಅನೇಕ ಜನಾಂಗ, ಅಷ್ಟ ಐಶ್ವರ್ಯಗಳು ಹಾಗೂ ಅಲ್ಲಿ ವೈಭವದಿಂದ ನೆಲೆಸಲು ದೇವೆತೆಗಳ ಆರ್ಕಿಟೆಕ್ಚರ್ ವಿಶ್ವಕರ್ಮರಿಗೆ ಸರಿಸಾಟಿಯಾದ ರಾಕ್ಷಸರ ಮಯ ಎಂಬುವ ಆರ್ಕಿಟೆಕ್ಚರ್ ರವರನ್ನು ಕಳಿಸಿದ್ದು ಅನ್ಯಾಯ ಎನ್ನಲಾದಿತೆ.
ಮತ್ತೊಂದು ವಿಷಯ ಮೊನ್ನೆ ಮೊನ್ನೆ ನಮ್ಮ ನೆಚ್ಚಿನ ಪ್ರಧಾನಿಗಳು ಮತ್ತು ಚೀನಾ ಅದ್ಯಕ್ಷರು ನಮ್ಮ ತಮಿಳುನಾಡಿನ ಮಹಾಬಲಿಪುರಂ ಗೇ ಬಂದಿದ್ದು ಎಲ್ಲರಿಗೂ ತಿಳಿದ ವಿಷಯ. ಮಹಾಬಲಿಪುರಂ ಹೆಸರು ಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಮಾತೃಭೂಮಿಗೆ ಸಮುದ್ರದ ಮೂಲಕ ಬರುವ ಬಹಳ ಹತ್ತಿರದ ದಾರಿ ಅದು!!. ಅದಕ್ಕಾಗಿ ಅದಕ್ಕೆ ಮಹಾಬಲಿಪುರಂ ಎಂದು ಹೆಸರು ಬಂದಿರುವುದು.
ಬ್ರಿಟಿಷ್ ರು ಬರೆಸಿದ ಡೊಂಗಿ ಇತಿಹಾಸ ಓದುವುದನ್ನು ಬಿಟ್ಟು ನೈಜ ಇತಿಹಾಸದ ಬಗ್ಗೆ ತಿಳಿಯಲು ಪ್ರಯತ್ನಿಸಿ.
ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು .
ಜೈ ಬಲಿ ಚಕ್ರವರ್ತಿ
ಜೈ ವಾಮನಮೂರ್ತಿ
ಜೈಹಿಂದ್