ಅಚ್ಚೇ ದಿನ್ ಕಬ್ ಆಯೇಗಾ, ಒಳ್ಳೇ ದಿನ ಯಾವಾಗ ಬರುತ್ತೆ ಅನ್ನುವ🔭 ಗುಲಾಮರ ಗಮನಕ್ಕೆ
Apr 22, 2024
2 min read
5
104
ಅಚ್ಚೇ ದಿನ್ ಆಯೇಗಾ ಒಳ್ಳೇ ದಿನ ಯಾವಾಗ ಬರುತ್ತೆ🔭 ಗುಲಾಮರ ಗಮನಕ್ಕೆ
👉🏻ಗೋಡೆ ಮೇಲೆ ಮೂತ್ರ ಮಾಡ್ತಾ ವ್ಯಕ್ತಿ ಕೇಳುತ್ತಾನೆ, ಒಳ್ಳೇ ದಿನ ಯಾವಾಗ ಬರುತ್ತೆ.
👉🏻ವಿದ್ಯುತ್ ಕಳ್ಳತನ ಮಾಡೋ ವ್ಯಕ್ತಿ ಕೇಳುತ್ತಾನೆ, ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಅಲ್ಲಿ ಇಲ್ಲಿ ಕಸ ಬಿಸಾಡುವವ ಕೇಳುತ್ತಾನೆ,ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಕೆಲಸ ಕಳ್ಳ ಸರ್ಕಾರಿ ಉದ್ಯೋಗಿ ಕೇಳುತ್ತಾನೆ,ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಟ್ಯಾಕ್ಸ್ ಕಳ್ಳತನ ಮಾಡುವವ ಕೇಳುತ್ತಾನೆ,ಒಳ್ಳೇ ದಿನ ಯಾವಾಗ ಬರುತ್ತೆ.
👉🏻ದೇಶ ದ್ರೋಹದ ಕೆಲಸ ಮಾಡುವವ ಕೇಳುತ್ತಾನೆ, ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಕೆಲಸಕ್ಕೆ ತಡವಾಗಿ ಹೊರಡುವ, ಬೇಗ ಮನೆಗೆ ಬರುವ ಸರಕಾರಿ ಉದ್ಯೋಗಿ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ
👉🏻ಹುಡುಗಿಯರಿಗೆ ಉಪಟಳ ಕೊಡುವ ವ್ಯಕ್ತಿ ಕೇಳುತ್ತಾನೆ,ಒಳ್ಳೇ ದಿನ ಯಾವಾಗ ಬರುತ್ತೆ.
👉🏻ರಾಷ್ಟ್ರಗೀತೆ ಹಾಡುವಾಗ ಗೌರವ ಕೊಡದ ವ್ಯಕ್ತಿ ಕೇಳುತ್ತಾನೆ,ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಮಕ್ಕಳನ್ನು ಶಾಲೆಗೆ ಕಳಿಸದೆ ಕೂಲಿಗೆ ಕಳಿಸುವವ ಕೇಳುತ್ತಾನೆ, ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಕಟುಕನ ತರಹ ಕಮಿಷನ್ ಪಡೆಯೋ ಡಾಕ್ಟರ್ ಕೇಳುತ್ತಾನೆ,ಒಳ್ಳೇ ದಿನ ಯಾವಾಗ ಬರುತ್ತೆ.
👉🏻ರಸ್ತೆಯಲ್ಲಿ ಕೆಂಪು ಸಿಗ್ನಲ್ ಲೆಕ್ಕಿಸದ ನಿಯಮ ಮುರಿಯುವ ಜನರು ಕೇಳುತ್ತಾರೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಪುಸ್ತಕಗಳಿಂದ ದೂರ ಓಡಿ ಹೋಗುವ ವಿದ್ಯಾರ್ಥಿ ಕೇಳುತ್ತಾನೆ,ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಕಾರ್ಖಾನೆಗಳಲ್ಲಿ ಕೆಲಸ ಮಾಡದೇ ಧರ್ಮಕ್ಕೆ ಸಂಬಳ ಪಡೆಯೋ ಜನ ಕೇಳುತ್ತಾರೆ,
ಒಳ್ಳೇ ದಿನ ಯಾವಾಗ ಬರುತ್ತೆ.
🔴ಮೊದಲು ನೀವು ಬದಲಾಗದೆ ಒಳ್ಳೇ ದಿನದ ಆಸೆ ಬಿಡಿ.🔴
ಯಾಕೆಂದರೆ ದೇಶ ನಿಮ್ಮ ಉಪದೇಶದಿಂದ ಅಲ್ಲ, ಆಚರಣೆಯಿಂದ ಬದಲಾಗುವುದು.
ಆಗಲೇ ಬರುವುದು ಒಳ್ಳೇ ದಿನ.
ಹಿಂದೆ 1947 ರಿಂದ ನಮ್ಮನ್ನಾಳಿದ ಸರ್ಕಾರಗಳು ದೇಶದ ಮೇಲೆ 55ಲಕ್ಷ,87ಸಾವಿರದ,149ಕೋಟಿ ರೂಪಾಯಿ ವೆಚ್ಚದ ಸಾಲ ಮಾಡಿ ತಮ್ಮ ತಮ್ಮ ಮನೆ ಕುಟುಂಬ ತುಂಬಿಸಿಕೊಂಡಿವೆ.
ಅದರ ಒಂದು ವರ್ಷದ ಬಡ್ಡಿಯೇ ಸುಮಾರು 4 ಲಕ್ಷದ 27ಸಾವಿರ ಕೋಟಿ ರೂಪಾಯಿ ಗಳು.
ಅಂದರೆ: 1ತಿಂಗಳಿಗೆ = 35ಸಾವಿರದ584ಕೋಟಿ ರೂಪಾಯಿ.
ಅಂದರೆ: 1ದಿನಕ್ಕೆ = 1ಸಾವಿರದ 186ಕೋಟಿ ರೂಪಾಯಿ.
ಅಂದರೆ: 1ಗಂಟೆಗೆ = 49ಕೋಟಿ ರೂಪಾಯಿ.
ಅಂದರೆ: 1 ನಿಮಿಷಕ್ಕೆ = 81ಲಕ್ಷ ರೂಪಾಯಿ.
ಅಂದರೆ: 1 ಸೆಕೆಂಡ್'ಗೆ = 1ಲಕ್ಷದ 35 ಸಾವಿರ ರೂಪಾಯಿ
ಯೋಚಿಸಿ! ದೇಶ ಪ್ರತಿ ಸೆಕೆಂಡ್ ಗೆ 1,35,000 ರೂಪಾಯಿ ಬರೇ ಹಳೇ ಸಾಲದ ಬಡ್ಡಿಯೇ ತುಂಬಿಸಬೇಕು.
ಅಂಥಾದ್ದರಲ್ಲಿ ಒಳ್ಳೇ ದಿನ ಅಷ್ಟು ಸುಲಭವಾಗಿ ಹೇಗೆ ಬರುತ್ತೆ.??
ದೇಶವನ್ನು ಲೂಟಿ ಮಾಡುವವರಿಂದ ಉಳಿಸಿ.
ಅರ್ಥವ್ಯವಸ್ಥೆಯನ್ನು ಬಲಪಡಿಸಲು ನಿಮ್ಮ ಯೋಗದಾನ ಮಾಡಿ.
ಟ್ಯಾಕ್ಸ್ ಕಟ್ಟೋ ವ್ಯಾಪಾರಿಯ ಹತ್ತಿರವೇ ವ್ಯಾಪಾರ ಮಾಡಿ.
ನೀವು ಕಷ್ಟ ಪಟ್ಟು ದುಡಿದು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಕಟ್ಟಿರುವ ತೆರಿಗೆ ಹಣವನ್ನು, ಕಾಮಗಾರಿ ಕಮಿಷನ್ ಮೂಲಕ ತಮ್ಮ ಮನೆ ಕುಟುಂಬ ಉದ್ದಾರ ಮಾಡುವ ಸರ್ಕಾರಗಳನ್ನು ಚುನಾಯಿಸುವ ದಡ್ಡತನ ತೋರಿಸ ಬೇಡಿ.
ಭಾರತವನ್ನು ಮತ್ತೆ ಸಮೃದ್ಧ ಭರಿತ ಮಾಡಿ.
🔴ಯಾಕೆಂದರೆ ಈ ದೇಶ ನಮ್ಮದು.!!!🔴
ಬಾದಾಮಿ 900ರು/ಕಿಲೋ/ ಆದ್ರೆ ಗುಟ್ಕಾ 4300- ಕಿಲೋ.
ಗೋಡಂಬಿ - 800 ರು/ಕಿಲೋ/ ಆದ್ರೆ ಸಿಗರೇಟ್ 5000- ಕಿಲೋ.
ಶುದ್ಧ ತುಪ್ಪ - 600 ರು/ ಆದ್ರೆ ತಂಬಾಕು - 1700- ಕಿಲೋ.
ಹಾಲು 50 ರು/ಲೀಟರ್ ಆದ್ರೆ ಸಾರಾಯಿ - 560 ರು
ಮತ್ತೆ ಹೇಳುತ್ತೀರಾ ಬೆಲೆ ಜಾಸ್ತಿ ಒಳ್ಳೇ ಆಹಾರ ಹೇಗೆ ತಿನ್ನಲಿ. ದೇಶದ ಪರಿಸ್ಥಿತಿ ಹಾಳಾಗಿಲ್ಲ, ಬದಲಿಗೆ ನಮ್ಮ ಹವ್ಯಾಸಗಳು ಹಾಳಾಗಿವೆ.
🙏ಭಾರತ ಮಾತೆಗೆ ಜಯವಾಗಲಿ.🙏
🚩ಜೈ ಹಿಂದ್....
🇮🇳ಜೈ ಭಾರತ್......